Home ಜಿಲ್ಲೆ ಪುಸ್ತಕ ಸಂಸ್ಕೃತಿ ನಮ್ಮದಾಗಬೇಕು:ಬೆಳಗುಂದಿ

ಪುಸ್ತಕ ಸಂಸ್ಕೃತಿ ನಮ್ಮದಾಗಬೇಕು:ಬೆಳಗುಂದಿ

ಸೈದಾಪೂರ:ಮಾ.೧೪:ಪ್ರತಿಯೊಬ್ಬರಿಗೂ ಸಂಸ್ಕಾರ ಅತಿ ಮುಖ್ಯವಾಗಿದೆ. ಇದಕ್ಕಾಗಿ ಪುಸ್ತಕ ಸಂಸ್ಕೃತಿ ನಮ್ಮದಾಗಬೇಕು ಎಂದು ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಒಳ್ಳೆಯ ಸ್ನೇಹಿತರನ್ನು ಇಟ್ಟುಕೊಂಡು ಕಠಿಣ ಪರಿಶ್ರಮದೊಂದಿಗೆ ಪ್ರಯತ್ನ ಮಾಡಿದರೆ ತಂದೆ, ತಾಯಿ, ಕಲಿಸಿದ ಗುರುಗಳು ಸೇರಿದಂತೆ ಶಾಲೆಗೆ ಉತ್ತಮ ಹೆಸರು ತರುವ ಮಕ್ಕಳು ನಾವಾಗುತ್ತೇವೆ ಎಂದು ಕಿವಿ ಮಾತುಗಳನ್ನು ಹೇಳಿದರು.
ನಿವೃತ್ತಾ ಮುಖ್ಯಗುರು ಚಂದ್ರಾಪ್ಪ ಗುಂಜನೂರ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಷ್ಠಿತ ಸಂಸ್ಥೆ ಇದಾಗಿದೆ. ಗಡಿ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಪರೀಕ್ಷೆಯ ಮೂಲಕ ಉತ್ತಮ ಫಲಿತಾಂಶ ಪಡೆದು ಗುರುಗಳಿಗೆ ಹೆಸರು ತರುವ ಸುವರ್ಣ ಅವಕಾಶ ನಿಮಗೆ ದೊರೆತಿದೆ. ಒಳ್ಳೆಯ ಸಾಧನೆ ನಿಮ್ಮದಾಗಲಿ ಎಂದು ಹಾರೈಸಿದರು.
ಇದಕ್ಕೂ ಮುಂಚೆ ಪ್ರೌಡ ಶಾಲೆಯ ಹಳೆಯ ವಿದ್ಯಾರ್ಥಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ೨೦೨೫ನೇ ಸಾಲಿನ ಅತ್ಯುನ್ನತ ಸೇವೆ ಹಾಗೂ ಉತ್ತಮ ಕಾರ್ಯ ನಿರ್ವಹಣೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯದ ಮುಖ್ಯಂತ್ರಿಗಳ ಚಿನ್ನದ ಪದಕ ಪುರಸ್ಕಾರಗೊಂಡ ಖತಾಲ್ ಹುಸೇನ್ ಇವರನ್ನು ಶಾಲಾ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಸಿದ್ರಾಮಪ್ಪಗೌಡ ಗೊಂದಡೆಗಿ, ಸುರೇಶ ಆನಂಪಲ್ಲಿ, ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ, ಗೂಳಪ್ಪ.ಎಸ್.ಮಲ್ಹಾರ, ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಕಾಶಿನಾಥ ಶೇಖಸಿಂದಿ ಪ್ರಾಸ್ಥಾವಿಕರ ಮಾತನಾಡಿದರು. ಅಭಿಲಾಷ ಸ್ವಾಗತಿಸಿದರು. ಸಂಗಾರಡ್ಡಿ ನಿರೂಪಿಸಿದರು. ಮಧು ಪಾಟೀಲ ವಂದಿಸಿದರು.

ನಾ ಕಲಿತ ಶಾಲೆಯಲ್ಲಿ ಸನ್ಮಾನಿತನಾಗುತ್ತಿರುವುದು ಸಂತಸವನ್ನುAಟು ಮಾಡಿದೆ. ಅಪೇಕ್ಷೆಯನ್ನು ಹೊಂದದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಉತ್ತಮ ಸಾದನೆಯೊಂದಿಗೆ ಪ್ರಶಸ್ತು, ಪರುಸ್ಕಾರಗಳು ನಮ್ಮದಾಗುತ್ತದೆ. ದುಶ್ಚಟಗಳಿಗೆ ಬಲಿಯಾಗಿದೆ. ಉತ್ತಮ ಗುಣಗಳನ್ನು ನಿಮ್ಮದಾಗಿಸಿಕೊಳ್ಳಿ.
ಖತಾಲ್ ಹುಸೇನ್ ಮುಖ್ಯಂತ್ರಿಗಳ ಚಿನ್ನದ ಪದಕ ಪುರಸ್ಕಾರಗೊಂಡ ಪ್ರಮುಖ ಅಗ್ನಿಶಾಮಕರು ಯಾದಗಿರಿ