Home ಜಿಲ್ಲೆ ಕಲಬುರಗಿ ತಪೋವನದಲ್ಲಿ ಸಂಭ್ರಮದಿAದ ಜರುಗಿದ ಜೋಡು ರಥೋತ್ಸವ

ತಪೋವನದಲ್ಲಿ ಸಂಭ್ರಮದಿAದ ಜರುಗಿದ ಜೋಡು ರಥೋತ್ಸವ

ಜೇವರ್ಗಿ: ಮಾ.೧೪:ತಾಲ್ಲೂಕಿನ ಸುಕ್ಷೇತ್ರ ಶಖಾಪುರಎಸ್.ಎ ಗ್ರಾಮದ ಆರಾಧ್ಯದೈವ ಸಿದ್ದಕುಲ ಚಕ್ರವರ್ತಿ ಸದ್ಗುರು ವಿಶ್ವಾರಾಧ್ಯರು ಮತ್ತು ಅವರ ಧರ್ಮಪತ್ನಿ ಮಾತೋಶ್ರೀ ಬಸವಾಂಬೆ ತಾಯಿಯವರ ೭೫ನೇ ಜಾತ್ರಾ ಮಹೋತ್ಸವ ಅಂಗವಾಗಿ ಸಹಸ್ರಾರು ಭಕ್ತರ ಜಯಘೋಷದ ನಡುವೆ ಅದ್ದೂರಿ ಜೋಡು ರಥೋತ್ಸವ ಜರುಗಿತು.
ಜಾತ್ರೆ ಅಂಗವಾಗಿ ಸದ್ಗುರು ವಿಶ್ವಾರಾಧ್ಯ ತಪೋವನ ಮಠದಲ್ಲಿ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿ-ಕೊಳ್ಳಲಾಗಿತ್ತು. ವಿಶ್ವಾರಾಧ್ಯರ ಮೂರ್ತಿಗೆ ಹಾಗೂ ಬಸವಾಂಬೆ ತಾಯಿಯವರಿಗೆಬೆಳಿಗ್ಗೆ ೬ ಗಂಟೆಗೆ ವಿವಿಧ ಗ್ರಾಮದ ಸದ್ಭಕ್ತರಿಂದ ಸದ್ಗುರು ವಿಶ್ವಾರಾಧ್ಯರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕ ನಡೆಯಿತು.

ವೀರಸೋಮೇಶ್ವರ ಶಖಾಪುರ ಗ್ರಾಮದಿಂದ ಶ್ರೀಮಠಕ್ಕೆ ಸಂಜೆ ೪ ಗಂಟೆಗೆ ನೂರಾರು ಜನ ಮುತ್ತೈದೆಯರ ಕುಂಭದ ಜತೆ ಕಳಸದ ಅದ್ದೂರಿ ಮೆರವಣಿಗೆ ನಡೆಯಿತು. ಸಂಜೆ ೬ ಗಂಟೆಗೆ ಹರನೂರ ಕ್ರಾಸ್‌ದಿಂದ ಶ್ರೀ-ಮಠದವರೆಗೆ ರಂಭಾಪುರೀ ಜಗದ್ಗುರು ಶಿವಾಚಾರ್ಯ ಸ್ವಾಮೀಜಿಗಳ ಅದ್ದೂರಿ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು.
ಸಂಜೆ ೭ ಗಂಟೆಗೆ ಸಹಸ್ರಾರು ಭಕ್ತರ ಜಯಘೋಷಗಳ ಮದ್ಯೆ ಅದ್ದೂರಿ ಜೋಡು ರಥೋತ್ಸವ ಜರುಗಿತು. ಈ ವೇಳೆ ಭಕ್ತರು ರಥದ ಮೇಲೆ ಬಾಳೆಹಣ್ಣುಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಜೇವರ್ಗಿ ತಾಲ್ಲೂಕಿನ ಶಖಾಪುರದಲ್ಲಿ ಜೋಡು ರಥೋತ್ಸವ ಅದ್ದೂರಿಯಾಗಿ ಜರುಗಿತು
ಉತ್ತತ್ತಿ ಎಸೆದು ಹರಕೆ ತೀರಿಸಿದರು. ಜಾತ್ರೆಗೆ ಬಂದ ಭಕ್ತಾದಿಗಳಿಗೆ ಅನ್ನಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ೧೧ ಗಂಟೆಗೆ ಖಾಸಗಿ ವಾಹಿನಿ ಕಲಾವಿದರಿಂದಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು. ಶುಕ್ರವಾರ ಮಠದ ಆವರಣದಲ್ಲಿ ಅದ್ದೂರಿ ತೇರಬಂಡಿ ಸ್ಪರ್ಧೆ ಹಾಗೂ ಕುಸ್ತಿ ಪಂದ್ಯ ನಡೆದವು. ಸ್ಪರ್ಧೆಯಲ್ಲಿ ವಿಜೇತ-ರಾದವರಿಗೆ ನಗದು ಹಾಗೂ ಬೆಳ್ಳಿ ಕಡಗ ನೀಡಿ ಅಭಿನಂದಿಸಲಾಯಿತು.