
ಬಾದಾಮಿ,ಮಾ.೧೩: ಸ್ಪಷ್ಟವಾದ ಗುರಿಯೊಂದಿಗೆ ಸತತ ಪ್ರಯತ್ನ ಮಾಡಿದರೆ ಏನನ್ನಾದರೂ ಸಾಧನೆ ಮಾಡಬಹುದು ಎಂದು ನಿವೃತ್ತ ಪ್ರಾಚಾರ್ಯ ರವೀಂದ್ರ ಮೂಲಿಮನಿ ಹೇಳಿದರು.
ಅವರು ತಾಲೂಕಿನ ಯಂಕAಚಿ ಮಣಿನಾಗರ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟಿçÃಯ ವಿಜ್ಞಾನ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಗುರಿಯೊಂದಿಗೆ ಸತತ ಪ್ರಯತ್ನ ಮಾಡಿದರೆ ಖಂಡಿತಾ ಯಶಸ್ಸನ್ನು ಪಡೆಯಬಹುದಾಗಿದ್ದು, ಇದರ ಜೊತೆಗೆ ಸುತ್ತಲಿನ ಪರಿಸರದೊಂದಿಗೆ ನಿರಂತರವಾಗಿ ಅನುಸಂಧಾನ ಮಾಡುತ್ತಿರಬೇಕು ಅಂದಾಗ ಮಾತ್ರ ಸಾಧಕರಾಗಲು ಸಾಧ್ಯವೆಂದು ಮಕ್ಕಳಿಗೆ ಕಿವಿಮಾತನ್ನು ಹೇಳಿದರು.
ವಿಜ್ಞಾನ ಕಠಿಣವಾದ ವಿಷಯವೇನಲ್ಲ ಎಲ್ಲ ವಿಷಯಗಳಿಗಿಂತ ಸುಲಭವಾದ ವಿಷಯವಾಗಿದ್ದು ನಮ್ಮಲ್ಲಿ ಪ್ರಶ್ನಿಸುವ ಮನೋಭಾವ ಇರಬೇಕು. ಪ್ರತಿ ವಿಷಯದಲ್ಲೂ ಕೂತುಹಲಿಗಳಾಗಿರಬೇಕು. ಅಂದಾಗ ಮಾತ್ರ ವಿಜ್ಞಾನ ಸುಲಭವಾಗಲು ಸಾಧ್ಯ ಎಂದು ಹೇಳಿದರು.
ಇನಾಂ ಹುಲ್ಲಿಕೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ವ್ಹಿ. ಗೌಡಪ್ಪಗೌಡ್ರ ಮಾತನಾಡಿ ಸಿ.ವ್ಹಿ ರಾಮನ್ ಅವರು ನಮ್ಮ ದೇಶ ಕಂಡ ಅಪ್ರತಿಮ ಭೌತವಿಜ್ಞಾನಿಯಾಗಿದ್ದು, ಅವರು ಇಡೀ ಜಗತ್ತಿಗೆ ಪರಿಚಯಿಸಿದ ರಾಮನ್ ಪರಿಣಾಮದ ಫಲವಾಗಿ ಇಂದು ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷವಾಗಿ ವೈದೈಕೀಯ ಕ್ಷೇತ್ರ ಅವರ ಸಾಧನೆಯನ್ನು ನಿತ್ಯ ಸ್ಮರಿಸುತ್ತದೆ. ಅವರು ಈ ದೇಶದ ವಿಜ್ಞಾನದ ಅಪೂರ್ವ ಮಾದರಿ ದೇಶಪ್ರೇಮದ ಪ್ರತೀಕವಾಗಿದ್ದಾರೆ ವಿಜ್ಞಾನದ ಪ್ರಯೋಗಳನ್ನು ಅತೀ ಕಡಿಮೆ ಸಲಕರಣಗಳ ಮೂಲಕವೂ ಪ್ರಯೋಗವನ್ನು ಮಾಡಬಹುದು. ವಿಜ್ಞಾನ ದುಬಾರಿ ಉಪಕರಣಗಳಲ್ಲಿಲ್ಲ ಅದನ್ನು ನೋಡುವ ಕಣ್ಣು ಮತ್ತು ಯೋಚಿಸುವ ಮೆದುಳಿನಲ್ಲಿ ಇದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ವಿಜ್ಞಾನಿಯಾಗಿದ್ದಾರೆ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಾವೇದ ಶೇಖ್ ಮಾತನಾಡಿ ಮಕ್ಕಳು ವಿಜ್ಞಾನ ವಿಷಯದ ಬಗ್ಗೆ ಭಯ ಪಡದೆ ಸುಲಭವಾಗಿ ಅಧ್ಯಯನ ಮಾಡಿದರೆ ಇದೂ ಕೂಡಾ ಸರಳವಾಗುತ್ತದೆ ಇದಕ್ಕೆ ಸತತ ಪರಿಶ್ರಮ ಪಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು
ಇನ್ನೋರ್ವ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಎ. ಹದ್ಲಿ ಮಾತನಾಡಿ ವಿಜ್ಞಾನವು ನಮ್ಮ ನಿತ್ಯ ಜೀವನದ ಒಂದು ಭಾಗವಾಗಿದ್ದು ಅದನ್ನು ಆಸಕ್ತಿಯಿಂದ ಮನನ ಮಾಡಿದರೆ ಹಾಗೂ ಸತತ ಪ್ರಯತ್ನ ಮಾಡಿದರೆ ನೀವೂ ಕೂಡಾ ಸಾಧಕರಾಗಬಹುದು ಎಂದರು.
ಕೆಜಿಬಿವಿ ಶಾಲೆಯ ಮುಖ್ಯಶಿಕ್ಷಕಿ ಬಸಮ್ಮ ನರಸಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಸಾಧಕರ ಜೀವನಕ್ರಮವನ್ನು ಅವಲೋಕನ ಮಾಡಿ ಅವರ ಮಾರ್ಗದರ್ಶನದ ಮೂಲಕ ಸಾಧನೆ ಮಾಡಲು ಮಕ್ಕಳಿಗೆ ಹೇಳಿದರು
ವೇದಿಕೆಯ ಮೇಲೆ ವಿಜ್ಞಾನ ವಿಷಯಶಿಕ್ಷಕಿಯರಾದ ರೇಣುಕಾ ಅಂಕಲಿ ಹಾಗೂ ಅನಿತಾ ಜಲಗೇರಿ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಶೈಲಾ ಪೂಜಾರ ನಿರೂಪಿಸಿದರು. ಶಾಲೆಯ ಶಿಕ್ಷಕಿಯರು, ಸಿಬ್ಬಂದಿಗಳು, ಹಾಗೂ ಶಾಲಾ ಮಕ್ಕಳು ಉಪಸ್ಥತರಿದ್ದರು.






















