Home ಜಿಲ್ಲೆ ಗೋಶಾಲೆ ಗೆ ಹೊಟ್ಟು – ಮೇವು ಕೊಡುಗೆ

ಗೋಶಾಲೆ ಗೆ ಹೊಟ್ಟು – ಮೇವು ಕೊಡುಗೆ


ಬಾದಾಮಿ,ಮಾ.೧೩: ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಸದ್ಭಕ್ತರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ೭ ಟ್ರಾ÷್ಯಕ್ಟರ್ ಕಡಲೆ ಹೊಟ್ಟು ಮತ್ತು ೧ ಟ್ರಾ÷್ಯಕ್ಟರ್ ಬಿಳಿ ಜೋಳದ ಮೇವು ಕೊಡುಗೆಯಾಗಿ ನೀಡಿದರು. ಶ್ರೀ ಶಿವಯೋಗ ಮಂದಿರದ ಉಪಾಧ್ಯಕ್ಷರು ಶ್ರೀ ಮ.ನಿ.ಪ್ರ . ಶ್ರೀ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ ಹಾವೇರಿ ಪೂಜ್ಯರು ಪ್ರತಿ ವರ್ಷ ಸಂಗನಾಳ ಗ್ರಾಮದ ಸದ್ಭಕ್ತರು ಕೊಡಮಾಡುವ ಬಿಳಿ ಜೋಳದ ಮೇವು ಹಾಗೂ ಕಡಲೆ ಮತ್ತು ಗೋಧಿ ಹೊಟ್ಟು ಸೇವೆ ಸ್ಮರಣೀಯ! ಶ್ರೀ ಕುಮಾರ ಶಿವಯೋಗಿಗಳು ಸಕಲ ಸದ್ಭಕ್ತರಿಗೆ ಸನ್ಮಂಗಲಗಳನ್ನು ಕರುಣಿಸಲೆಂದು ಹಾರೈಸಿದರು. ಮಣಕವಾಡದ ಶ್ರೀ ಮ.ನಿ.ಪ್ರ. ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ವಿಜಯಪುರದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಉಪಸ್ಥಿತರಿದ್ದರು.