Home ಜಿಲ್ಲೆ ನೀರು, ಮೇವಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ

ನೀರು, ಮೇವಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ


ಚನ್ನಮ್ಮನ ಕಿತ್ತೂರು,ಮಾ.೧೨: ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು ಕೊಳವೆಭಾವಿಗಳು ಸ್ವಲ್ಪ ನೀರು ಕಡಿಮೆಯಾಗಿರುತ್ತವೆ. ಮಳೆಗಾಲ ಪ್ರಾರಂಭವಾಗುವುದು ದೂರವಿದ್ದು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮವಹಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.


ಸ್ಥಳೀಯ ತಾಪಂದಲ್ಲಿ ಮತ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗ್ರತೆ ಕ್ರಮವಹಿಸಲು ಏರ್ಪಡಿಸಿದ್ದ ಸಭೆಯಲ್ಲಿ ಅಧ್ಯಕ್ಷಸ್ಥಾನ ವಹಿಸಿ ಮಾತನಾಡಿ ಗ್ರಾಮಗಳಲ್ಲಿ ನೀರು ವ್ಯರ್ಥವಾಗಿ ಹರಿಯದಂತೆ ವಾಟರ್‌ಮನ್‌ಗಳ ಜವಾಬ್ದಾರಿಯಾಗಿದ್ದು ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಕುಡಿಯುವ ನೀರಿನ ಮತ್ತು ಮೇವಿನ ವ್ಯವಸ್ಥೆ ನೋಡಿಕೊಳ್ಳಬೇಕು. ನೀರಿನ ಲಭ್ಯತೆ ಬಗ್ಗೆ ನಿಖರ ಮಾಹಿತಿ ನೀಡಬೇಕು. ನೀರು ಮತ್ತು ಮೇವಿನ ಅಭಾವ ಇರುವ ಕಡೆಗಳಲ್ಲಿ ಬೋರವೆಲ್‌ಗಳಿಂದ ನೀರು ಪಡೆದು ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ, ಜಾನುವಾರುಗಳಿಗೆ ಮೇವು ಸಹ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕೆಂದರು.


ತಹಶಿಲ್ದಾರ ಕಲ್ಲನಗೌಡ ಪಾಟೀಲ ಮಾತನಾಡಿ ಬೇಸಿಗೆ ಆರಂಭವಾಗಿದ್ದರಿAದ ಗ್ರಾಪಂ ವ್ಯಾಪ್ತಿಯಲ್ಲಿ ನೀರು ಪೋಲು ಮಾಡದಂತೆ ಅಧಿಕಾರಿಗಳು, ವಾಟರ್‌ಮನ್‌ಗಳು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಅನಾವಶ್ಯಕ ನೀರು ವ್ಯರ್ಥ ಮಾಡದಂತೆ ಮಿತವಾಗಿ ನೀರು ಬಳಸಲು ತಿಳಿಹೇಳಬೇಕು. ಅದಲ್ಲದೇ ನೀರಿನ ರಕ್ಷಣೆ ಬಗ್ಗೆ ಮಾಹಿತಿ ನೀಡಿ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಅಥಿತಿಗಳಾಗಿ ಇಓ ನಿಂಗಪ್ಪ ಮಸಳಿ, ಗ್ರಾಪಂ ಅಭಿವೃದ್ದಿ ಅಧಿಕಾರಿಗಳಾದ ಸ್ಮಿತಾ ಚಂದರಗಿ, ಮಂಜುನಾಥ ಕುಠಾಳೆ, ಸುಬಾಸ್ ದಾನಪ್ಪನವರ, ರಾಧಾ, ಈಶ್ವರ ಹಡಪದ, ರವಿ ಉಡಕೇರಿ, ಎಸ್.ಎಂ ಪಾಟೀಲ, ವಿನಾಯಕ ಕೊರವಿ, ಜೈರಾಮ ಕಾದ್ರೋಳ್ಳಿ, ಜಗದೀಶ ಗೌಡರ, ಮೇರಿ ಯಲಕಪತಿ, ರಶ್ಮಿ ಥಾವರಿ, ಗುರುವೈನವರಮಠ ಅಧಿಕಾರಿಗಳಿದ್ದರು.