Home ಜಿಲ್ಲೆ ಸಸಿ ನೆಡುವ ಕಾರ್ಯಕ್ರಮ

ಸಸಿ ನೆಡುವ ಕಾರ್ಯಕ್ರಮ

ಚನ್ನಮ್ಮನ ಕಿತ್ತೂರು-11 ತಾಲೂಕಿನ ದೇವಗಾಂವ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ “ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ್” ವತಿಯಿಂದ ಸಸಿಗಳನ್ನು ನೆಡಲಾಯಿತು. ನಂತರ ಪರಿಸರ ಸಂರಕ್ಷತೆ ಕುರಿತು ಜಾಗೃತಿ ಚಟುವಟಿಕೆ ಮಾಡಲಾಯಿತು.

ಇದೇ ಸಮಯದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಜರುಗಿತು. ಪರಿಸರಕ್ಕಾಗಿ ಜೀವನ ಶೈಲಿ ಬದಲಾವಣೆ ಇತ್ಯಾದಿ ಚಟುವಟಿಕೆ ಕಾರ್ಯಕ್ರಮ ನಡೆಸಲಾಯಿತು. ಮುಖ್ಯೋಪಾಧ್ಯಾಯ ಸದಾಶಿವ ಪೋಳ ಮಾತನಾಡಿದರು.

ಈ ವೇಳೆ ದೈಹಿಕ ಶಿಕ್ಷಕ ನಾಗಪ್ಪ ಕೇರವಾಡ, ಸಹಶಿಕ್ಷಕರುಗಳಾದ ಸುವರ್ಣಲತಾ ಹಾಲಗೇರಿ, ತನುಜಾ ತೆಂಬದಮನಿ, ಕು. ಮಂಜುಳಾ ಬಾರ್ಕಿ, ವಿಜ್ಞಾನ ಶಿಕ್ಷಕ ರಾಘವೇಂದ್ರ ಹೊಂಬಳ, ಎಸ್‍ಡಿಎಂಸಿ ಅಧ್ಯಕ್ಷ-ಉಪಾಧ್ಯಕ್ಷ, ಸರ್ವಸದಸ್ಯರು, ಗ್ರಾಮಸ್ಥರು ಸೇರಿದಂತೆ ಇನ್ನಿತರರಿದ್ದರು.