Home ಜಿಲ್ಲೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೮೨ನೇ ರ್ಯಾಂಕ್ ಪಡೆದ ಸಂದೀಪ್ ಬಾಡದ್‌ಗೆ ಸನ್ಮಾನ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ೮೨ನೇ ರ್ಯಾಂಕ್ ಪಡೆದ ಸಂದೀಪ್ ಬಾಡದ್‌ಗೆ ಸನ್ಮಾನ

ಯಾದಗಿರಿ:ಮಾ.೧೧:ಯುಪಿಎಸ್‌ಸಿ ಪರೀಕ್ಷೆಯಲ್ಲಿ ೮೨ನೇ ರ್ಯಾಂಕ್ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ ನಗರದ ಹೆಮ್ಮೆಯ ಪುತ್ರ ಸಂದೀಪ್ ಬಾಡದ್ ಅವರನ್ನು ಅವರ ಸ್ವಗೃಹದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಗಣ್ಯರು, ಸಂದೀಪ್ ಬಾಡದ್ ಅವರ ಸಾಧನೆ ಯಾದಗಿರಿ ಜಿಲ್ಲೆಯ ಯುವಕರಿಗೆ ಪ್ರೇರಣೆಯಾಗಿದ್ದು, ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪದಿAದ ಯಾವುದೇ ಗುರಿಯನ್ನು ಸಾಧಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಇಂತಹ ಸಾಧನೆಗಳು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ಇನ್ನಷ್ಟು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡು ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತೀಯ ವೀರಶೈವ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ, ಬಣಜಿಗ ಸಮಾಜದ ಅಧ್ಯಕ್ಷ ಮಹೇಶ ವಾಲಿ, ಮಾಜಿ ಅಧ್ಯಕ್ಷ ಸಂಗಪ್ಪ ಲಾಳಸಂಗಿ, ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇಂದುಧರ ಸಿನ್ನೂರ, ಶೇಖರ ರ್ಯಾಖಾ, ರಾಜಶೇಖರ ಪುಲಮಾಮಿಡಿ, ಬಸವರಾಜ ರಾಜಾಪುರ, ದೇವಿಂದ್ರಪ್ಪ ಹವಾಲ್ದಾರ, ಅರುಣಿ ಶಿವಕುಮಾರ, ಬಸವರಾಜಪ್ಪ ಅಜಲಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.