Home ಜಿಲ್ಲೆ ರಾಷ್ಟ್ರ ಮಟ್ಟದ ಬಿಲ್ಲುಗಾರಿಕೆ ಸ್ಪರ್ಧೆಗೆ ದೇವಾಪುರ ವಿದ್ಯಾರ್ಥಿಗಳು ಆಯ್ಕೆ

ರಾಷ್ಟ್ರ ಮಟ್ಟದ ಬಿಲ್ಲುಗಾರಿಕೆ ಸ್ಪರ್ಧೆಗೆ ದೇವಾಪುರ ವಿದ್ಯಾರ್ಥಿಗಳು ಆಯ್ಕೆ

ಸುರಪುರ:ಮಾ.೧೧: ವನವಾಸಿ ಕಲ್ಯಾಣ ರಿ ಕರ್ನಾಟಕ ಸಂಸ್ಥೆಯ ಏಕಲವ್ಯ ಬಿಲ್ಲುಗಾರಿಕೆ ಕ್ರೀಡಾ ಕೇಂದ್ರದ ತಾಲೂಕಿನ ದೇವಾಪುರ ಗ್ರಾಮದ ಏಕಲವ್ಯ ಬಿಲ್ಲುಗಾರಿಕೆ ಕ್ರೀಡಾ ಪಟುಗಳಾದ ಅನ್ನಪೂರ್ಣ ೮ ನೇ ತರಗತಿ ಮತ್ತು ಬಲಭೀಮ ಕಂಪಾಪೂರ ೯ ನೇ ತರಗತಿ ಇಬ್ಬರು ವಿದ್ಯಾರ್ಥಿಗಳು ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ ಆರ್ಚರಿ ಅಸೋಸಿಯೇಷನ್ ಬೆಂಗಳೂರು ಇವರ ಸಂಯೋಗದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಬಿಲ್ಲುಗಾರಿಕೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಇಂಡಿಯನ್ ರೌಂಡ್ ವಿಭಾದ ರಾಷ್ಟ್ರಮಟ್ಟದ ಬಿಲ್ಲುಗಾರಿಕೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಾರ್ಚ್ ೨೭ ರಿಂದ ಏಪ್ರಿಲ್ ೭ ರವರೆಗೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ೧೫ ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಯೋಮಿತಿಯ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.ಕ್ರೀಡಾ ಪಟುಗಳ ಸಾಧನೆಗೆ ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥೆಯ ಮುಖಂಡರು,ದೇವಾಪುರ ಗ್ರಾಮಸ್ಥರು, ಕ್ರೀಡಾ ಪಟುಗಳ ಪಾಲಕರು ಹಾಗೂ ತರಬೇತುದಾರ ಮೌನೇಶ್ ಕುಮಾರ್, ಕರ್ನಾಟಕ ಆರ್ಚರಿ ಅಸೋಸಿಯೇಷನ್ ಕೊಚ್ ಅನಿಲ್ ಕುಮಾರ್ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.