
ಧಾರವಾಡ,ಮಾ.೧೦: ವಿಶ್ವದ ಮಾಧ್ಯಮ ಮುಕ್ತವಾಗಿದೆ. ಒಬ್ಬರಿಂದ ಒಬ್ಬರಿಗೆ ಮಾಹಿತಿಯನ್ನು ತಲುಪಿಸುವುದು ಮಾಧ್ಯಮದ ಕಾರ್ಯವಾಗಿದೆ. ಹಳೆಯ ಕಾಲದ ಪತ್ರಿಕೋದ್ಯಮ ಬದಲಾಗಿದೆ. ಹೊಸ ಹೊಸ ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಿAದ ಪತ್ರಿಕಾ ರಂಗಕ್ಕೆ ಹೊಸ ದಿಕ್ಸೂಚಿ ಮೂಡಿದೆ. ವಿದ್ಯಾರ್ಥಿಗಳ ಪತ್ರಿಭೆ ಗುರುತಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮೀಡಿಯಾ ಫೆಸ್ಟ್ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ.ಖಾನ್ ಹೇಳಿದರು.
ಅವರು, ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶಯದಲ್ಲಿ ಆಯೋಜಿಸಿರುವ ಮೀಡಿಯಾ ಫೆಸ್ಟ್-೨೦೨೬ ರ ಸ್ಪರ್ಧೆಗಳನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಮಾಧ್ಯಮದ ಮುಂದೆ ಸಾಕ?ÀÄ್ಟ ಹೊಸ ಸವಾಲುಗಳು ಎದುರಾಗುತ್ತಿವೆ. ತಂತ್ರಜ್ಞಾನದ ಜೊತೆಗೆ ಪತ್ರಿಕೋದ್ಯಮವನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎಂಬುದನ್ನು ಅರಿಯಬೇಕಿದೆ. ಮುಂದಿನ ಆಗೋಹೋಗೋಗಳ ಬಗ್ಗೆ ಎಐ ಗುರುತಿಸುವುದಿಲ್ಲ. ಹೊಸ ರೀತಿಯ ತಂತ್ರಜ್ಞಾನದ ಟೂಲ್ ಬಳಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಡೀಪ್ ಫೆಕ್, ಫೆಕ್ ನ್ಯೂಸ್ ಸೇರಿದಂತೆ ಹಲವಾರು ಸವಾಲುಗಳು ಮಾಧ್ಯಮಗಳ ಮುಂದಿವೆ. ನವೀನ ತಂತ್ರಜ್ಞಾನದ ಮೂಲಕ ಪ್ರತಿಯೊಬ್ಬರೂ ಪತ್ರಕರ್ತರಾಗಬಹುದು ಎಂದು ಅವರು ತಿಳಿಸಿದರು.
ಅವರು ಮಾತನಾಡಿ, ೧೯೮೨ ರಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗ ಪ್ರಾರಂಭವಾಯಿತು. ಧಾರವಾಡದಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಕಲೆ, ಸಾಹಿತ್ಯ, ಸಂಗೀತಕ್ಕೆ ಸಾಕ?ÀÄ್ಟ ಪ್ರಮಾಣದಲ್ಲಿ ಕಲಾವಿದರು ಇದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಹಲವು ಪತ್ರಿಕೆಗಳ ಸಂಪಾದಕರಾಗಿದ್ದಾರೆ. ೫೦೦-೬೦೦ ವಿದ್ಯಾರ್ಥಿಗಳು ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ೨೦ ನೇ ಶತಮಾನವನ್ನು ಪತ್ರಿಕೆಗಳ ಸುವರ್ಣಯುಗ ಎಂದು ಹೇಳಬಹುದು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ತಂತ್ರಜ್ಞಾನಕ್ಕೆ ತಕ್ಕಂತೆ ನಾವು ಕೂಡ ಬದಲಾಗಬೇಕು. ಆಯಾ ಕಾಲಕಾಲಕ್ಕೆ ಪತ್ರಕರ್ತರು ಬದಲಾವಣೆ ಹೊಂದಬೇಕು. ಪತ್ರಿಕೋದ್ಯಮ ನಾಲ್ಕು ಚಕ್ರದ ವಾಹನ ಇದ್ದಂತೆ. ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಪತ್ರಿಕೋದ್ಯಮ ವಿಭಾಗಗಳು, ವಾರ್ತಾ ಇಲಾಖೆ ಇವುಗಳಿಂದ ಪತ್ರಿಕೋದ್ಯಮ ಸುಸೂತ್ರವಾಗಿ ನಡೆಯುತ್ತಿದೆ. ಸಂವಿಧಾನ ಮತ್ತು ಕಾನೂನುಗಳನ್ನು ಎತ್ತಿ ಹಿಡಿಯುವ ಕೆಲಸಗಳನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಉತ್ತಮ ಪತ್ರಕರ್ತರಾಗಿ ಹೊರ ಹೊಮ್ಮಬೇಕು. ಹೊಸ ಹೊಸ ಕ್ಷೇತ್ರಗಳಲ್ಲಿ ಉದ್ಯೋಗ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ.ಸಂಜಯಕುಮಾರ ಮಾಲಗತ್ತಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ ಹಿರೇಮಠ ವಂದಿಸಿದರು.






















