
ಚನ್ನಮ್ಮನ ಕಿತ್ತೂರು,ಮಾ.೯: ಅಂತರರಾಷ್ಟಿçÃಯ ಮಹಿಳಾ ದಿನವಾಗಿ ಆಚರಿಸಲ್ಪಡುತ್ತಿದ್ದು ಇದು ಮಹಿಳೆಯರ ಸಲಬಲಿಕರಣದ ಸಂಕೇತವಾಗಿದ್ದು ಪ್ರತಿವರ್ಷ ಮಾರ್ಚ ೮ ರಂದು ಈ ದಿನವು ಮಹಿಳೆಯರ ಹಕ್ಕುಗಳು, ಗಣತೆ, ಸಮಾನತೆ ಮತ್ತು ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಅವಕಾಶ ಒದಗಿಸಿಕೊಡುತ್ತದೆ ಎಂದು ಕೆಪಿಸಿಸಿ ಸದಸ್ಯ ರೋಹಿನಿ ಪಾಟೀಲ ಹೇಳಿದರು.
ಕಿತ್ತೂರು ಅಭಿವೃದ್ದಿ ಪ್ರಾಧಿಕಾರ ಹಾಗೂ ರೋಹಿಣಿ ಬಾಬಾಸಾಹೇಬ ಮತ್ತು ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಅಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ರಾಣಿ ಚನ್ನಮ್ಮ ಸ್ಮಾರಕ ಭವನದಲ್ಲಿ ಆಯೋಜಿಸಿದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವಹಿಸಿಕೊಂಡು ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಆಯುಕ್ಷರು ಕಿತ್ತೂರು ಅಭಿವೃದ್ದಿ ಪ್ರಾಧಿಕಾರ ಹಾಗೂ ಸವದತ್ತಿ ಯಲ್ಲಮ್ಮನ ಗುಡ್ಡದ ಪ್ರಾಧಿಕಾರದ ಕಾರ್ಯದರ್ಶಿ ಪ್ರಭಾವತಿ ಫಕ್ಕೀರಪುರ ಮಾತನಾಡಿ ಅಂತರರಾಷ್ಟಿçÃಯ ಮಹಿಳಾ ದಿನದ ಉದ್ದೇಶ ಮಹಿಳೆಯರ ಮೇಲಿನ ಗೌರವ ಹೆಚ್ಚಿಸುವುದು ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು. ಅವರನ್ನು ಸಬಲೀಕರಣಗೊಳಿಸುವುದು. ಸಮಾಜ ಸೇವಕಿ ಸೃಷ್ಟಿ ವಿಶ್ವಾಸ ವೈದ್ಯ, ಬೆಳಗಾವಿ ಶ್ರೇಯಾ ಜೈನ್, ಕುಮಾರಿ ಪೂರ್ವಿ ಜವಳಿ ಭರತನಾಟ್ಯ, ಸ್ವಾಗತ ಸುಧಾ ಬೆನಕಟ್ಟಿ, ಆಸಪಾಕ್ ಹವಾಲ್ದಾರ, ಬ್ಲಾಕ ಅಧ್ಯಕ್ಷ ಸಂಗನಗೌಡ ಪಾಟೀಲ, ಸಾಗರ ದೇಸಾಯಿ, ಕೃಷ್ಣಾ ಬಾಳೇಕುಂದರಗಿ, ಶಂಕರ ಇಟಗಿ ಸೇರಿದಂತೆ ನೂರಾರು ಮಹಿಳೆಯರು, ಮಕ್ಕಳಿದ್ದರು.






















