
ಹುಬ್ಬಳ್ಳಿ,ಮಾ.೯:ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ಓಂಕಾರ್ ಮಾನೆ ಫೌಂಡೇಶನ್ ವತಿಯಿಂದ ಮಹಿಳಾ ದಿನಾಚರಣೆಯನ್ನು ನಡೆಯಿತು. ವರ್ಷವಿಡಿ ರಜೆಯಿಲ್ಲದೇ ಕಾರ್ಯನಿರ್ವಹಿಸುವ ಸಮಸ್ತ ಸ್ತಿçà ಕುಲಕ್ಕೆ ಓಂಕಾರ್ ಮಾನೆ ಫೌಂಡೇಶನ್ ಮೂಲಕ ಗೌರವ ಸಲ್ಲಿಸುವ ವಿಶೇಷ ಅವಕಾಶ ಈ ದಿನವಾಗಿತ್ತು. ಮಹಿಳಾ ಪೌರಕಾರ್ಮಿಕರು, ಮಹಿಳಾ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಸತ್ಕರಿಸಿ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳಾದ ಡಾ.ಕುಸುಮಾ ಮಾಗಿ, ಶಾರದಾ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರಾಧಾ ಶಟವಾಜಿ ಮತ್ತು ಡಾ.ಶೇಖರ್ ಮಾನೆ ಮಾತನಾಡಿದರು. ಡಾ.ವೈಶಾಲಿ ಮಾನೆ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶ್ರೀಮತಿ ಗಾಣಿಗೇರ ಮೇಡಂ ಇವರಿಂದ ಪ್ರಾರ್ಥನೆ, ಡಾ.ವೈಶಾಲಿ ಮಾನೆ ಇವರಿಂದ ಸ್ವಾಗತ ಭಾಷಣ ನೆರವೇರಿತು. ಸುನಂದಾ ಜಾಲಗಾರ್ ವಂದಿಸಿದರು.






















