Home ಜಿಲ್ಲೆ ಮಕ್ಕಳಲ್ಲಿ ಸಮಾಜದ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯವಾಗಲಿ

ಮಕ್ಕಳಲ್ಲಿ ಸಮಾಜದ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯವಾಗಲಿ

ಲಕ್ಷ್ಮೇಶ್ವರ,ಮಾ9: ಶಿಸ್ತುಬದ್ಧವಾದ ಜೀವನ, ಸಂಸ್ಕಾರ ಸಂಸ್ಸøತಿಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಬ್ರಾಹ್ಮಣ ಸಮಾಜದಲ್ಲಿನ ಮಕ್ಕಳಲ್ಲಿ ಸಮಾಜದ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯವಾಗಬೇಕು, ಅಲ್ಲದೆ ಸಂಘಟನೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಹೇಳಿದರು.


ಅವರು ಪಟ್ಟಣದ ಶಂಕರಭಾರತಿಮಠದಲ್ಲಿ ನಡೆದ ಬ್ರಾಹ್ಮಣ ಸಮಾಜದ ಸಭೆಯಲ್ಲಿ ಮಾತನಾಡಿದರು. ಸಮಾಜದಲ್ಲಿ ವಿವಾಹ, ಉದ್ಯೋಗ ಸೇರಿದಂತೆ ಅನೇಕ ಸಮಸ್ಯೆಗಳಿವೆ, ಅವುಗಳಿಗೆ ಪರಿಹಾರ ಕಂಡು ಕೊಳ್ಳುವದು ಸಹ ನಮ್ಮಲ್ಲಿಯೇ ಇದೆ, ಇದೀಗ ಬ್ರಾಹ್ಮಣ ನಿಗಮ ಮಂಡಳಿ ವತಿಯಿಂದ ಸ್ವಯಂ ಉದ್ಯೋಗ ಮಾಡುವವರಿಗೆ, ಶಿಕ್ಷಣಕ್ಕಾಗಿ ಅನೇಕ ರೀತಿಯ ಆರ್ಥಿಕ ಸಹಾಯಗಳು ದೊರೆಯುತ್ತಿವೆ ಅವುಗಳ ಸದುಪಯೋಗಪಡಿಸಿಕೊಳ್ಳುವದು ಅವಶ್ಯವಾಗಿದೆ, ನಮ್ಮ ಸಮಾಜದಲ್ಲಿನ ವಿವಾಹದ ಸಮಸ್ಯೆಗಳಿಗೆ ಪರಿಹಾರ ನೀಡಲು ಜಿಲ್ಲಾ ಮಟ್ಟದಲ್ಲಿ ವಧು-ವರರ ಯೋಚನೆಯಿದೆ ಎಂದು ಹೇಳಿದ ಅವರು ಇದೇ ತಿಂಗಳು 21 ರಿಂದ ಶ್ರೀಕ್ಷೇತ್ರ ಶೃಂಗೇರಿಯಲ್ಲಿ ನಡೆಯುವ ಜಗದ್ಗುರುಗಳ ವರ್ದಂತಿ ಉತ್ಸವ ನಿಮಿತ್ಯ ಗಾಯತ್ರಿ ಜಪಾನುಷ್ಠಾನದಲ್ಲಿ ಗದಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶಿಷ್ಟ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸೋಣ ಎಂದು ಹೇಳಿದರು.


ಗದಗ ಜಿಲ್ಲಾ ಶಾಂಕರ ತತ್ವ ಪ್ರಸಾರ ಸಂಚಾಲಕ ಗಿರೀಶ ಪಂತರ ಮಾತನಾಡಿ ಶ್ರೀಕ್ಷೇತ್ರ ಶೃಂಗೇರಿಯಲ್ಲಿ ಜಗದ್ಗುರುಗಳ ವಧರ್ಂತಿ ಉತ್ಸವದ ನಿಮಿತ್ತ ಇದೇ ಮಾ. 21ರಂದು ನಡೆಯಲಿರುವ ಗಾಯತ್ರಿ ಜಪಾನುಷ್ಠಾನಕ್ಕೆ ಈ ಭಾಗದ ಎಲ್ಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು, ಇಂದಿನ ದಿನಗಳಲ್ಲಿ ಹಿಂದೂ ಧರ್ಮ ಅಧೋಗತಿಯತ್ತ ಸಾಗುತ್ತಿದೆ. ಇದನ್ನು ತಪ್ಪಿಸಲು ಶೃಂಗೇರಿ ಜಗದ್ಗುರುಗಳು ಅನೇಕ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಅದಕ್ಕೆ ಜಿಲ್ಲೆಯಿಂದ ಅನೇಕ ಯುವಕರು, ಹಿರಿಯರು, ಮಹಿಳೆಚಿiÀುರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.


ಲಕ್ಷ್ಮೇಶ್ವರ ತಾಲೂಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ, ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಮಾತನಾಡಿ ಬ್ರಾಹ್ಮಣ ಸಮಾಜದವರು ಸಂಘಟಿತರಾಗುವದು ಅವಶ್ಯವಾಗಿದೆ, ಸಮಾಜದ ಬಗ್ಗೆ ಚಿಂತನೆ ಮಾಡಬೇಕಾದ ಅವಶ್ಯಕತೆ ಎದುರಾಗಿದೆ, ಅನೇಕ ಸಮಸ್ಯೆಗಳಿದ್ದರೂ ಸಹ ಸ್ವಾಭಿಮಾನದಿಂದ ಜೀವನ ಸಾಗಿಸುವ ಬ್ರಾಹ್ಮಣ ಸಮಾಜ ಬಾಂಧವರು ಸಂಘಟನೆಯ ಶಕ್ತಿಯನ್ನು ತೋರ್ಪಡಿಸಬೇಕಾಗಿದೆ ಎಂದರು.