
ಸುರಪುರ:ಮಾ.೯:ಬಣಗಾರ ಫೌಂಡೇಶನ್ ವತಿಯಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವೈದ್ಯೆ ಡಾ.ಸುವರ್ಣಾ ದೇವಿ ಆರ್.ವಿ ನಾಯಕ ಮಾತನಾಡಿ,ಪ್ರತಿ ವರ್ಷ ಬಣಗಾರ ಫೌಂಡೇಶನ್ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದರು.ಸರಕಾರದಿAದ ನೀಡಲಾಗುತ್ತಿರುವ ಕ್ಯಾನ್ಸರ್ ವ್ಯಾಸಿನೇಷನ್ ಹಾಕಿಸಿಕೊಂಡು ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಲು ತಿಳಿಸಿ,ಇತ್ತೀಚಿಗೆ ಸುರಪುರದಲ್ಲಿ ಬಾಲ್ಯ ವಿವಾಹ ಹಾಗೂ ಅಪ್ರಾಪ್ತ ಗರ್ಭಧಾರಣೆಯ ಪ್ರಕರಣಗಳು ಹೆಚ್ಚುತ್ತಿದ್ದು ಅವುಗಳನ್ನು ತಡೆಗಟ್ಟೋದು ನಮ್ಮ ಕರ್ತವ್ಯ ಆಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶಕುಂತಲಾ ಜಾಲವಾದಿ ಮಾತನಾಡಿ, ಹೆಣ್ಣು ಒಂದು ಶಕ್ತಿ, ಹೆಣ್ಣು ಸಂಸಾರದ ಕಣ್ಣು ಹೆಣ್ಣಿನಿಂದಲೇ ಕುಟುಂಬ ಸುಭದ್ರವಾಗಿರಲು ಸಾದ್ಯತಾಯಿಯ ಋಣ ತೀರಿಸಲು ಸಾದ್ಯವಿಲ್ಲ ಎಂದು ತಿಳಿಸಿದರು.ಹೆಣ್ಣು ಭಾವನಾತ್ಮಕವಾಗಿ ,ಮಾನಸಿಕವಾಗಿ ಪುರುಷರಿಗಿಂತ ಸಧೃಢ.ಮನಸ್ಸು ಮಾಡಿದರೆ ಹೆಣ್ಣು ಏನು ಬೇಕಾದರೂ ಸಾಧಿಸಬಲ್ಲಳು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಯಲಲಿತಾ ಪಾಟೀಲ ಮಾತನಾಡಿ, ಬಾಲ್ಯ ವಿವಾಹ ನಿಷೇಧಿಸುವ ಹಲವಾರು ಕಾನೂನುಗಳಿವೆ ಅವುಗಳನ್ನು ಸರಿಯಾಗಿ ಉಪಯೋಗಿಸಬೇಕಿದೆ ಎಂದು ತಿಳಿಸಿ ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾಳೆ ಇದಕ್ಕೆ ಪುರುಷರ ಸಹಕಾರ ಹಾಗೂ ಪ್ರೋತ್ಸಾಹ ಕಾರಣ ಎಂದರು.ವಿದೇಶಗಲ್ಲಿ ಮಕ್ಕಳಿಗೆ ೧೩ನೇ ವಯಸ್ಸಿನಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಹೀಗಾಗಿ ಅಲ್ಲಿ ಟೀನೇಜ್ ಪ್ರೆಗ್ನೆನ್ಸಿ ಕಂಡು ಬರುವದಿಲ್ಲ ಆದರೆ ನಮ್ಮಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಕೊರತೆ ಇರುವುದರಿಂದ ಹಲವಾರು ಸಮಸ್ಯೆಗಳು ತಲೆದೋರತ್ತವೆ ಎಂದರು.
ಸಾನಿಧ್ಯ ವಹಿಸಿದ್ದ ಹಾವೇರಿಯ ಹೊಸ ಮಠದ ಶ್ರೀ ಬಸವ ಶಾಂತಲಿAಗ ಮಹಾಸ್ವಾಮೀಜಿ ಮಾತನಾಡಿ,ಮಹಿಳೆ ಉತ್ತಮ ಶಿಕ್ಷಣ ಪಡೆದು ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು, ದೌರ್ಜನ್ಯ ಹೆಸರು ಎದುರಿಸುವ ದಿಟ್ಟತನನ್ನು ತಾನು ರಕ್ಷಣೆ ಮಾಡಿಕೊಳ್ಳುವ ಶಕ್ತಿ ಗಳಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಸೈದಾ ಬಿ ಜಮಾದಾರ್ ಉಪನ್ಯಾಸಕರು, ನೀಲಮ್ಮ ಪ್ರಧಾನಗುರು, ರೇಣುಕಾ ನಿಂಗಪ್ಪ ನಾಯಕ್ ಬಿಜಾಸಪುರ, ಮಾದೇವಮ್ಮ ಶಂಕ್ರಪ್ಪ ಬಣಗಾರ್ , ನಿರ್ಮಲ ರವಿ ಉಪಾಧ್ಯಕ್ಷರು ಮಾರಿಕಾಂಬ ಸಂಘ ಸುರಪುರ,ವಿಜಯಲಕ್ಷ್ಮಿ ಡಿ ಉದ್ದಾರ್ ರೂಪ ಜಿ ರುಮಾಲ್ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ: ಸುಜಾತಾ ನಾಯಕ್ ಶಿಕ್ಷಣ ಕ್ಷೇತ್ರ,
ನಂದಿತಾ ಬಿ ನಿಡಗುಂದಿ ಸಹಕಾರ ಕ್ಷೇತ್ರ,ಶ್ರೀದೇವಿ ಮಂಜುನಾಥ್ ಹಿರೇಮಠ ಸಾಮಾಜಿಕ ಕ್ಷೇತ್ರ,ಜಯಸುಧಾ ವಿರುಪಾಕ್ಷಿ ಸಹಕಾರ ಕ್ಷೇತ್ರ,ವಿಶೇಷವಾಗಿ ಭರತನಾಟ್ಯ ಬಾಲ ಪ್ರತಿಭೆ ಸಾನ್ವಿ ಡಿ ಜೊಗಂಡಬಾವಿ ಮುದ್ದೇಬಿಹಾಳ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಣಗಾರ್ ಫೌಂಡೇಶನ್ ಅಧ್ಯಕ್ಷ ವಸಂತ್ ಕುಮಾರ್ ಬಣಗಾರ ನೇತೃತ್ವ ವಹಿಸಿದ್ದರು.
ಶರಣಮ್ಮ ದೊಡ್ಡಮನಿ ನಿರೂಪಿಸಿದರು, ದೀಪಿಕಾ ಉದ್ಧಾರ ಪ್ರಾರ್ಥಿಸಿದರು, ಲಲಿತ ಯಾದವ್ ಸ್ವಾಗತಿಸಿದರು, ಐಶ್ವರ್ಯ ವಂದಿಸಿದರು.






















