Home ಜಿಲ್ಲೆ ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ:ಪೃಥ್ವಿಕ ಶಂಕರ್

ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ:ಪೃಥ್ವಿಕ ಶಂಕರ್

ಸೈದಾಪುರ:ಮಾ.೫:ಶಿಕ್ಷಣದಿಂದ ಮಾತ್ರ ಪ್ರಗತಿಯನ್ನು ಕಾಣಲು ಸಾಧ್ಯ ಇದಕ್ಕಾಗಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಐಪಿಎಸ್ ಅವರು ಸಲಹೆ ನೀಡಿದರು.
ಸಮೀಪದ ಗುಡೂರು ಗ್ರಾಮದಲ್ಲಿ ಕಾಮಣ್ಣೋರ್ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾದ ರೇನ್ ಪಬ್ಲಿಕ್ ಶಾಲೆಯ ಮೊದಲ ವಾರ್ಷಿಕೋತ್ಸವ ನಿಮಿತ್ಯ ಹಮ್ಮಿಕೊಂಡ ರೇನ್ ಬೋ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಹಿಂದುಳಿದಿದೆ ಎಂಬ ಮನಸ್ಥಿತಿಯಿಂದ ನೀವೆಲ್ಲರೂ ಹೊರ ಬರಬೇಕು. ಏಕೆಂದರೆ ಕಳೆದ ವರ್ಷದ ನೀಟ್ ಪರೀಕ್ಷೆಯಲ್ಲಿ ಇಲ್ಲಿನ ಮಕ್ಕಳೇ ಅತಿ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿದ್ದಾರೆ. ಜಿಲ್ಲೆಯ ಅತ್ಯಂತ ಗಡಿ ಪ್ರದೇಶದಲ್ಲಿರುವ ಗೂಡೂರುದಂತಹ ಪುಟ್ಟ ಗ್ರಾಮದಲ್ಲಿ ರೇನ್ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸಿ, ಇಲ್ಲಿನ ವಿದ್ಯಾರ್ಥಿಗಳಿಗೆ ಗ್ರಾಜ್ಯುವೇಶನ್ ಸರ್ಟಿಫಿಕೇಟ್ ವಿತರಣೆಯಂತಹ ಕಾರ್ಯಕ್ರಮಗಳು ಗಮನ ಸೆಳೆದವು. ನಗರ ಪ್ರದೇಶದ ಶಾಲೆಗಳಿಗೆ ಸರಿಸಮಾನವಾಗಿ ಶೈಕ್ಷಣಿಕ ಸೌಲಭ್ಯವನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ರೇನ್ ಪಬ್ಲಿಕ್ ಶಾಲೆಯ ಪುಟಾಣಿ ಮಕ್ಕಳಿಗೆ ಕ್ರೀಡೆ ಹಾಗೂ ಇನ್ನಿತರ ಪ್ರಶಸ್ತಿಗಳನ್ನು ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಭಾಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣ್ಮನ ಸೆಳೆದವು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಮುಕ್ತ ಮಠದ ಪೂಜ್ಯಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಶಂಭುಲಿAಗೇಶ್ವರ ಮಹಾಸ್ವಾಮಿಗಳು, ಮೈಸೂರು ಜಿಲ್ಲೆಯ ಸಹಾಯಕ ಆಯುಕ್ತರಾದ ಕೆಎಎಸ್ ಅಧಿಕಾರಿ ಆಶಪ್ಪ ಪೂಜಾರಿ, ಕೆಪಿಸಿಸಿ ಸದಸ್ಯರಾದ ಚಂದ್ರಶೇಖರ್ ವಾರದ, ಯುವ ಮುಖಂಡರಾದ ಗುರುನಾಥರೆಡ್ಡಿಗೌಡ ರೊಟ್ನಡಿಗಿ, ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಪಿಡ್ಡಪ್ಪ ಪೂಜಾರಿ ಹಾಗೂ ಕಾಮಣ್ಣೋರ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕಾಮಣ್ಣಕಾಮಣ್ಣೋರ ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮಣ ಗುಡೂರು ಸೇರಿದಂತೆ ರೇನ್ ಬೋ ಪಬ್ಲಿಕ್ ಶಾಲೆಯ ಪಾಲಕ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಅರುಣಿಮ ವಾರ್ಷಿಕ ವರದಿಯನ್ನು ವಾಚಿಸಿದರು, ಶ್ರೀಮಾ ಮೋಹನ್ ನಿರೂಪಿಸಿದರು, ಶ್ವೇತಾ ಸ್ವಾಗತಿಸಿದರು ಶಿವಲಿಂಗಮ್ಮ ವಂದಿಸಿದರು.