
ತಾಳಿಕೋಟೆ:ಮಾ.೧: ಪ್ರಜಾಸೌಧ ನಿರ್ಮಾಣಕ್ಕೆ ಸಂಬAದಿಸಿ ಕಳೆದ ೨, ೩ ವರ್ಷಗಳಿಂದಲೇ ಜಾಗೆ ಹುಡುಕುತ್ತಿದ್ದರೂ ಇಲ್ಲಿಯವರೆಗೆ ಯಾರೂ ಜಾಗೆ ನೀಡಲು ಮುಂದೆ ಬರಲಿಲ್ಲಾ ಈಗ ದಾನಿಗಳು ಸರ್ಕಾರದಿಂದ ಯಾವುದೇ ಅಪೇಕ್ಷೆ ಪಡೆಯದೇ ೨ ಎಕರೆ ಜಾಗೆ ನೀಡಿದ್ದಾರೆ ಈಗ ಕಟ್ಟಡ ಪ್ರಾರಂಬಿಸುವAತಹದಲ್ಲಿ ಕೆಲವರು ವಿರೋಧಿಸುವದು ಸರಿಯಲ್ಲಾವೆಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅದ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ತಿಳಿಸಿದ್ದಾರೆ.
ಶನಿವಾರರಂದು ಬೆಂಗಳೂರಿನಿAದ ದೂರವಾಣಿ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ನಾಡಗೌಡ(ಅಪ್ಪಾಜಿ) ಅವರು ತಾಳಿಕೋಟೆ ನಗರದಲ್ಲಿ ಪ್ರಜಾಸೌದ ಕಟ್ಟಲು ಈಗ ನಿಗಧಿಪಡಿಸಿರುವ ಜಾಗೆಯನ್ನು ಹಿಂದಿನ ಜಿಲ್ಲಾದಿಕಾರಿಗಳು ಪರಿಶೀಲಿಸಿದ್ದಾರೆ ಈಗೀನ ಜಿಲ್ಲಾಧಿಕಾರಿಗಳು ಸಹ ಎರಡು ಭಾರಿ ಪರಿಶೀಲಿಸಿ ಅಂತಿಮವಾಗಿ ತಿರ್ಮಾನ ತೆಗೆದುಕೊಂಡಿದ್ದಾರೆ ಇದರಲ್ಲಿ ನನ್ನದೇನುಪಾತ್ರವಿಲ್ಲಾ ಮತ್ತು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿರುವದು ಬೇರೆ ದಾನಿಗಳು ಯಾರೂ ಸಿಗದಕ್ಕೆ ಜಾಗೆಯನ್ನು ಫಾಯಿನಲ್ ಮಾಡಿದ್ದಾರೆ ನಾನು ಈಗಲೂ ಬದ್ದನಾಗಿದ್ದೇನೆ ಈಗ ನಿಗದಿಪಡಿಸಿದ ಜಾಗೆ ಬೇಡ ಅನ್ನುವವರು ಪಟ್ಟಣಕ್ಕೆ ಇನ್ನಷ್ಟು ಹತ್ತಿರಕ್ಕೆ ಜಾಗೆ ಯಾರಾದರೂ ದಾನರೂಪದಲ್ಲಿ ನೀಡುವವರಿದ್ದರೆ ನೀಡಲಿ ಅದೇ ಸ್ಥಳದಲ್ಲಿ ಮಾಡಿಸುತ್ತೇನೆಂದರು. ಈಗ ನಿಗದಿಪಡಿಸಿರುವ ಜಾಗೆಯ ಹತ್ತಿರ ಗುರಡ್ಡಿಯವರ ಶಾಲೆ ಇದೆ ಸಾಕಷ್ಟು ಮನೆಗಳು ಆಗುತ್ತಿವೆ ಹುಡ್ಕುಬಡಾವಣೆಯು ಹತ್ತಿರವಿದೆ ಮೈಲೇಶ್ವರ ಗ್ರಾಮವೂ ಕೂಡಾ ಸೀಘ್ರದಲ್ಲಿಯೇ ತಾಳಿಕೋಟೆ ನಗರದೊಳಗೆ ಸೇರ್ಪಡೆಗೊಳ್ಳಲಿದೆ ಎಂದ ಅವರು ಕೆಲವು ನಮ್ಮ ಪಕ್ಷದ ಕಾಂಗ್ರೇಸ್ ಮುಖಂಡರುಗಳು ವಿರೂದಿಸುತ್ತಿರುವದು ಅವರ ಉದ್ದೇಶವೇ ಬೇರೆ ಅರ್ಥಕೊಡುತ್ತಿದೆ ಇವರು ವಿರೋದಿಸುವ ಮುಂಚೆ ನನ್ನ ಜೊತೆಗೆ ಚರ್ಚಿಸಬೇಕಿತ್ತು ಆ ಕೆಲಸವನ್ನು ಇವರು ಮಾಡಿಲ್ಲಾ ಇವರ ಉದ್ದೇಶವೇನೆಂಬುದು ತಿಳಿಯದ್ದಾಗಿದೆ ಎಂದು ಶಾಸಕ ನಾಡಗೌಡ ಅವರು ಹೇಳಿದರು.
ನಾನೂ ೫ ಲಕ್ಷ ಕೊಡುವೆ
ಈಗಾಗಲೇ ತಾಳಿಕೋಟೆ ಪಟ್ಟಣದ ಸಮೀಪ ಜಾಗೆ ಇದ್ದವರೆಲ್ಲರೂ ರಿಯಲ್ ಎಷ್ಟೇಟ್ ಮಾಡಿ ಪ್ಲಾಟ್ಗಳನ್ನು ಮಾರಾಟ ಮಾಡಿದ್ದಾರೆ ಹೀಗಿರುವಾಗ ಜಾಗೆ ಎಲ್ಲಿಯೂ ಸಿಗುತ್ತಿಲ್ಲಾ ಹಾಗೇನಾದರೂ ಯಾರಾದರೂ ಜಾಗೆ ಕೊಡುವವರಿದ್ದರೆ ನಾನೂ ಕೂಡಾ ಆ ಜಾಗೆಯ ಖರೀದಿಗೆ ನನ್ನ ಪಾಲಿನ ೫ ಲಕ್ಷರೂ ಕ್ರೂಡಿಕರಿಸಲು ಕೊಡುತ್ತೇನೆ ಯಾರಾದರೂ ಜಾಗೆ ಕೊಡಿಸುವವರಿದ್ದರೆ ಕೊಡಿಸಲಿ ಎಂದರು.
೧೩೭ ಏಕರೆಗೆ ಜಾಗೆಗೆ ಟ್ರೀಮಿನ್ ಆರ್ಡರ್ ತಪ್ಪಾಗಿದೆ
ಡೋಣಿ ನದಿ ತೀರದ ೧೩೭ ಏಕರೆ ಜಾಗೆಗೆ ಸಂಬAದಿಸಿ ಟ್ರೀಮಿನ್ ಆರ್ಡರ್ ಡಿಪೇಕ್ಟವ್ಹಿ ಇದೆ ಒಂದೇ ವ್ಯಕ್ತಿಗೆ ೧೩೭ ಏಕರೆ ಆರ್ಡರ್ ಮಾಡುವ ಕಾನೂನೇ ಇಲ್ಲಾ ಹೀಗೀರುವಾಗ ಅದು ಹೇಗೆ ಆಗಿದೆ ನೋಡಬೇಕು ಈ ಜಾಗೆಗೆ ದಾರಿಯೇ ಇಲ್ಲಾ ಡೋಣಿ ನದಿ ಉಕ್ಕಿ ಬಂದಾಗ ಅರ್ದ ಜಮೀನು ನೀರಿನಲ್ಲಿರುತ್ತದೆ ಇದಕ್ಕೆ ಸೇಪ್ಟಿ ವ್ಹಾಲ್ ಮಾಡಬೇಕೆಂದರೆ ೨೦ ಕೋಟಿಗೂ ಅಧಿಕ ಹಣ ಬೇಕು ಇಷ್ಟೇಲ್ಲಾ ಖರ್ಚು ಮಾಡಲು ಹೇಗೆ ಸಾದ್ಯ ಈ ಜಮೀನಿನ ಮೇಲೆ ಟ್ರೀಮಿನ್ ಆರ್ಡರ್ ಡಿಪೇಕ್ಟವ್ಹಿ ಇರುವದರಿಂದ ಇದು ಹೇಗೆ ಆಯ್ತು ಎಂಬುದು ಪರಿಶೀಲಿಸುವ ಕಾರ್ಯ ಅಧಿಕಾರಿಗಳು ಮಾಡಲಿದ್ದಾರೆಂದು ಶಾಸಕ ನಾಡಗೌಡ ಹೇಳಿದರು.
ಪಿಡಬ್ಲುಡಿ ಜಾಗೆಯಲ್ಲಿ ಮಾಡಲು ಅಸಾದ್ಯ
ಪ್ರಜಾಸೌಧವು ಈಗೀರುವ ಪಿಡಬ್ಲುಡಿ ಪ್ರವಾಸಿ ಮಂದಿರದ ಜಾಗೆಯಲ್ಲಿ ಮಾಡಬೇಕೆನ್ನುತ್ತಿದ್ದಾರೆ ಈ ಜಾಗೆಯಲ್ಲಿ ಮಾಡಲು ಅಸಾದ್ಯವಾಗಿದೆ ಈ ಜಾಗೆಯಲ್ಲಿ ಹೊಸ ತಾಲೂಕಿಗೆ ಸಂಬAದಿತ ಪಿಡಬ್ಲುಡಿ ಕಚೇರಿ ಸ್ಥಾಪನೆಯಾಗಲಿದೆ ಇದರ ಜೊತೆಗೆ ಜಿಲ್ಲಾ ಪಂಚಾಯ್ತಿ ಕಚೇರಿ, ವಾಟರ್ ಬೋರ್ಡ ಆಫಿಸ್ ಒಳಗೊಂಡು ಗೋದಾಮುಕೂಡಾ ನಿರ್ಮಾಣವಾಗಲಿದೆ ಸರ್ಕಿಟ್ ಹೌಸ್ ಬೇಕೆ ಬೇಕು ಹೀಗಿರುವಾಗಿ ಅವರ ಜಾಗೆ ಅವರಿಗೇ ಸಾಲುವದಿಲ್ಲಾ ಅವರು ಹೇಗೆ ಪ್ರಜಾಸೌಧ ನಿರ್ಮಾಣಕ್ಕೆ ಜಾಗೆ ನೀಡುತ್ತಾರೆಂದು ಪ್ರಶ್ನೀಸಿದರು. ಕೆಇಬಿ ಪ್ರಾವ್ಹೇಟ್ ಸಂಸ್ಥೆ ಆ ಜಾಗೆಯೂ ಅವರು ಕೊಡುವದಿಲ್ಲಾ ಮತ್ತು ಪಂಚಸೈಯದ ಕೇರೆಯ ಜಾಗೆಯಲ್ಲಿ ಮಾಡಲು ಬರುವದಿಲ್ಲಾ ಸುಪ್ರೀಮ್ ಕೋರ್ಟ ನಿರ್ದೇಶನವಿದೆ ಕೇರೆಯ ಜಾಗೆಯನ್ನು ಯಾವುದಕ್ಕೆ ಬಳೆಸದೇ ಕೇರೆಯ ನಿರ್ಮಾಣಕ್ಕೆ ಬಳೆಸಬೇಕಂತಿದೆ ಎಂದರು.
ಕ್ಯಾನ್ಸ್ಲ್ ಆದರೆ ನಾಡಗೌಡರ ಮೇಲೆ ಗೂಬೆ ಕೂಡಿಸಬೇಡಿ
ಹೊಸ ೫೨ ತಾಲೂಕುಗಳ ಪೈಕಿ ೫೧ ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಟೆಂಡರ್ ಕರೆದು ಕಟ್ಟಡ ನಿರ್ಮಾಣದ ಕಾರ್ಯ ಪ್ರಾರಂಭಗೊAಡಿವೆ ನಮ್ಮ ತಾಳಿಕೋಟೆಯಲ್ಲಿಯೇ ಜಾಗೆ ಇಲ್ಲದಕ್ಕೆ ತಡವಾಗಿದೆ ಈ ಭಾರಿ ಕ್ಯಾನ್ಸ್ಲ್ ಆದರೆ ಶಾಸಕ ಅಪ್ಪಾಜಿ ನಾಡಗೌಡರ ಮೇಲೆ ಗೂಭೆ ಕೂಡಿಸುವ ಮತ್ತು ಅಪವಾದ ಕೊಡುವ ಕಾರ್ಯ ಮಾಡಬೇಡಿ ಎಂದು ವಿರೋಧಿಸುವವರಿಗೆ ಹೇಳಲು ಬಯಸುತ್ತೇನೆಂದ ಶಾಸಕ ನಾಡಗೌಡ ಅವರು ಪ್ರಜಾಸೌಧ ನಿರ್ಮಾಣವಾದರೆ ಎಲ್ಲ ಇಲಾಖೆಗಳ ಹೊಸ ಕಚೇರಿಗಳು ಪ್ರಾರಂಭಗೊಳ್ಳಲಿದೆ ತಾಳಿಕೋಟೆಯಲ್ಲಿ ತಾಲೂಕಾ ಪಂಚಾಯ್ತಿ ಕಾರ್ಯನಿರ್ವಹಿಸುತ್ತಿದೆ ಯಾರದೋ ಜಾಗೆಯಲ್ಲಿ ಪ್ರಾರಂಬಿಸಲಾಗಿದೆ ಅವರು ಬೇಡ ಎಂದರೆ ಎಲ್ಲಿ ಹೋಗಬೇಕು ಈ ತಾಪಂ ಕಚೇರಿಗೂ ಜಾಗೆ ಅಗತ್ಯವಾಗಿದೆ ಎಂದರು. ಅಡ್ಡಿ ಪಡಿಸುವವರ ಬಗ್ಗೆ ನಾನು ತಲೆ ಕೆಡಿಸುವದಿಲ್ಲಾವೆಂದರು. ಈಗಲೂ ಸಮೀಪದಲ್ಲಿ ಜಾಗೆ ಯಾರಾದರೂ ಕೊಡುವವರಿದ್ದರೆ ಕೊಡಲಿ ನಾನು ಅಲ್ಲಿಯೇ ಪ್ರಾಮಾಣಿಕವಾಗಿ ಮಾಡಲು ಪ್ರಯತ್ನಿಸುತ್ತೇನೆಂದರು.






















