
ಕಲಬುರಗಿ:ಏ.3:ಗಂಗಾನಗರದ ಶ್ರೀ ಜೈ ಗಂಗಾ ಹನುಮಾನ್ ಮಂದಿರದಲ್ಲಿ 36ನೇ ಭವ್ಯ ರಥೋತ್ಸವ ಅದ್ದೂರಿಯಾಗಿ ಜರುಗಿತು. ಹನುಮಾನ್ ಜಯಂತಿಯ ಪ್ರಯುಕ್ತ ನಡೆದ ಈ ಮಹೋತ್ಸವವು ಸಾವಿರಾರು ಭಕ್ತರ ಜೊತೆಗೆ ಪುರಂದರ ಸೇವೆ ಭಕ್ತಿಪೂರ್ವಕವಾಗಿ ನಡೆಯಿತು.
ಕಲಬುರಗಿ ನಗರದ ಗಂಗಾನಗರದ ಶ್ರೀ ಜೈ ಗಂಗಾ ಹನುಮಾನ್ ಮಂದಿರದಲ್ಲಿ ಹನುಮಾನ್ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸುವುದರೊಂದಿಗೆ 36ನೇ ಭವ್ಯ ರಥೋತ್ಸವವು ಭಕ್ತರ ಜೈ ಘೋಷಗಳ ಮಧ್ಯೆ ಅದ್ದೂರಿಯಾಗಿ ಜರುಗಿತು. ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಂಘ ಹಾಗೂ ಶ್ರೀ ಜೈ ಗಂಗಾ ಹನುಮಾನ್ ಜಾತ್ರ ಉತ್ಸವ ಸಮಿತಿ ಇವರ ಸಹಯೋಗದಲ್ಲಿ ಈ ಮಹೋತ್ಸವವು ಹಮ್ಮಿಕೊಳ್ಳಲಾಯಿತು.
ಗುರುವಾರ ಹನುಮಾನ್ ಜಯಂತಿಯ ನಿಮಿತ್ತ, ಹನುಮಾನ್ ತೊಟ್ಟಿಲೋತ್ಸವವು ವಿಶೇಷವಾಗಿ ಜರುಗಿತು. ಪ್ರಾರ್ಥನೆ, ಪೂಜೆ ಮತ್ತು ಹೋಮ್ ಹವನಗಳಲ್ಲಿ ಭಕ್ತರು ಪಾಲ್ಗೊಂಡಿದ್ದರು ಅದನ್ನು ಅನುಸರಿಸಿದ ನಂತರ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರ ಅವರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು ಹಾಗೂ ನಂತರ ಅನ್ನಸಂತರ್ಪಣೆಯ ಚಾಲನೆ ನೀಡಿದರು.
ಮಧ್ಯಾಹ್ನ ನಂದಿಕೋಲ ಕುಣಿತ, ಪಲ್ಲಕ್ಕಿ ಉತ್ಸವ, ಡೊಳ್ಳು, ಬಾಜಾ, ಬಜಂತ್ರಿ, ಹಲಿಗೆ, ಬ್ಯಾಂಡ್ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಪುರಂತರ ಸೇವೆ ನಡೆಯಿತು. ಸಾಯಂಕಾಲ 6:30ಕ್ಕೆ, 36ನೇ ರಥೋತ್ಸವಕ್ಕೆ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮಕನೂರ ಅವರಿಂದ ಚಾಲನೆ ನೀಡಲಾಯಿತು. ನಂತರ, ಸಾವಿರಾರು ಭಕ್ತರ ಜೈ ಘೋಷಗಳ ಮಧ್ಯೆ ರಥೋತ್ಸವ ನಡೆಯಿತು.
ಭಕ್ತರು ರಥಕ್ಕೆ ಖಾರಿಕ ನಾರ ಬಾಳೆಹಣ್ಣು ಎಳೆಯುವ ಮೂಲಕ ಭಕ್ತಿ ಮೆರೆದರು.
ರಾತ್ರಿ ಪೂರ್ತಿ, ವಿವಿಧ ಕಲಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ಆಯೋಜಿಸಲಾಗಿದೆ
ಈ ರಥೋತ್ಸವದಲ್ಲಿ, ಶ್ರೀ ಷ.ಬ್ರ. ವೀರಮಹಂತ ಶಿವಾಚಾರ್ಯರ (ಮಹಾಂತೇಶ್ವರ ಮಠ, ಚಿಣಮಗೇರಾ), ಶ್ರೀ ಷ.ಬ್ರ. ಡಾ. ರಾಜಶೇಖರ ಶಿವಾಚಾರ್ಯರ (ಚವದಾಪೂರಿ ಹಿರೇಮಠ, ಬ್ರಹ್ಮಪೂರ, ಕಲಬುರಗಿ) ಮತ್ತು ಪೂಜ್ಯ ಶ್ರೀ ಕೋಟೇಶ್ವರ ಶಿವಯೋಗಿಗಳ (ಕಾಶಿ ವಿಶ್ವನಾಥ ಮಂದಿರ ಸಂಸ್ಥಾನ ಮಠ, ತೊನಸಹಳ್ಳಿ) ದಿವ್ಯ ಸಾನಿಧ್ಯ ವಹಿಸಿದ್ದರು
ಇನ್ನೂ ಇದೇ ಸಂದರ್ಭದಲ್ಲಿ ವೇದಿಕೆ ಮೇಲಿರುವ ಗಣ್ಯರಿಗೆ ಸನ್ಮಾನಿಸಿ
ಈ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬಳವಾಡ, ಕಾರ್ಯದರ್ಶಿ ಸಂತೋಷ ಹುಳಕೆರಿ, ಅಂಬು ಡಿಗ್ಗಿ, ರಾಯಪ್ಪ ಹೊನಗುಂಟಿ, ಶಾಂತಪ್ಪ ಕೂಡಿ, ವಿಜಯಕುಮಾರ್ ಹದಗಲ್, ದತ್ತು ಹೊನ್ನಳ್ಳಿ, ಅನಿಲ ಕೂಡಿ, ಅಶೋಕ ಬಿದನೂರ, ಮಲ್ಲಿಕಾರ್ಜುನ ಕೂಡಿ, ಶ್ರೀಕಾಂತ್ ಆಲೂರ, ಶರಣು ಕೌಲಗಿ, ಬಾಬಾಸಾಹೇಬ ಕೂಡಿ ಮತ್ತು ಮತ್ತಿತರ ಸಮಿತಿ ಸದಸ್ಯರು ಹಾಗೂ ಗಂಗಾನಗರ ಮತ್ತು ಸುತ್ತಮುತ್ತಲಿನ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಮಹೋತ್ಸವವು ನಗರದಲ್ಲಿ ಬೃಹತ್ ಹನುಮಾನ್ ಭಕ್ತಿ ಪ್ರಭಾವವನ್ನು ಮೂಡಿಸಿ, ಭಕ್ತರು ಹನುಮಾನ್ ದೇವರ ಪಂಥದಲ್ಲಿ ಹೊಸ ಪ್ರೇರಣೆಯನ್ನು ಪಡೆಯುವ ಮೂಲಕ ಯಶಸ್ವಿಯಾಗಿ ಸಂಪನ್ನವಾಯಿತು.






















