
ಸಂಜೆವಾಣಿ ನ್ಯೂಸ್
ಮೈಸೂರು: ಜು.09:- ಅಪರಾಧಗಳ ಪತ್ತೆಯಲ್ಲಿ ಸಕ್ರಿಯವಾಗಿದ್ದ ಮೈಸೂರು ಜಿಲ್ಲಾ ಪೆÇಲೀಸರು, ಕೇವಲ ಒಂದು ವಾರದಲ್ಲಿ 30 ಪ್ರಕರಣಗಳನ್ನು ಪತ್ತೆ ಹಚ್ಚಿ 35 ಮಂದಿ ಖದೀಮರನ್ನು ಬಂಧಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ, ಕಳ್ಳತನ, ದರೋಡೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು, ತಾಲೂಕುವಾರು ಅಪರಾಧಗಳ ಪತ್ತೆಗೆ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಕೇವಲ ಒಂದು ವಾರದಲ್ಲಿ ಜಿಲ್ಲೆಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣಗಳ ಬೆನ್ನತ್ತಿದ್ದ ವಿಶೇಷ ತಂಡದ ಸದಸ್ಯರು, 35 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂಧ 1.55 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಮಲ್ಲಿ ಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.
ಮೈಸೂರು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಹೆಚ್ಚಾದ ಹಿನ್ನಲೆಯಲ್ಲಿ ಪ್ರಕರಣ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪರಿಣಾಮ ಒಂದು ವಾರದಲ್ಲಿ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಶ್ರಮವಹಿಸಿ 30 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಪರಾಧ ಪ್ರಕರಣಗಳ ಪತ್ತೆಗೆ ಶ್ರಮಿಸಿದ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿಗೆ ಪ್ರಶಂಸನಾ ಪತ್ರದೊಂದಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿ, ಸ್ಥಳದಲ್ಲಿಯೇ ಪ್ರಶಂಸನಾ ಪತ್ರಗಳನ್ನು ವಿತರಣೆ ಮಾಡಿದರು.
ಎಎಸ್ಪಿಗಳಾದ ಸಿ.ಮಲ್ಲಿಕ್ ಮತ್ತು ಎಲ್. ನಾಗೇಶ್ ಇದ್ದರು.
ಯಾವ್ಯಾವ ಪ್ರಕರಣ ಪತ್ತೆ: ನಂಜನಗೂಡು ಗ್ರಾಮಾಂತರ ಠಾಣೆಯ ದರೋಡೆ ಪ್ರಕರಣದಲ್ಲಿ 7 ಮಂದಿ ಬಂಧಿಸಿ 49.5 ಲಕ್ಷ ರೂ. ಮೌಲ್ಯದ ನಗದು, ವಾಹನ ವಶಪಡಿಸಿಕೊಳ್ಳಲಾಗಿದೆ. ಜಯಪುರ ಠಾಣೆಯ 8 ಮನೆ ಕಳ್ಳತನ ಪ್ರಕರಣಗಳಲ್ಲಿ, ಓರ್ವ ಆರೋಪಿಯನ್ನು ಬಂಧಿಸಿ 65.20 ಲಕ್ಷ ರೂ. ಮೌಲ್ಯದ 498 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಬೈಲುಕುಪ್ಪೆ ಠಾಣೆಯಲ್ಲಿ 3 ಮನೆ ಕಳ್ಳತನ ಪ್ರಕರಣಗಳಲ್ಲಿ 3 ಬಂಧನ, 15.56 ಲಕ್ಷ ರೂ. ನಗದು, ಚಿನ್ನಾಭರಣ, ಹುಣಸೂರು ಗ್ರಾಮಾಂತರದಲ್ಲಿ 3 ಮನೆ ಕಳ್ಳತನ ಪ್ರಕರಣಗಳಲ್ಲಿ, 7 ಮಂದಿ ಬಂಧನ, 1.55 ಲಕ್ಷ ರೂ. ಚಿನ್ನಾಭರಣ, ಹುಣಸೂರು ಪಟ್ಟಣ ಠಾಣೆಯಲ್ಲಿ 1 ಮನೆ ಕಳ್ಳತನ ಪ್ರಕರಣದಲ್ಲಿ 2 ಬಂಧನ, 5 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಕೆ.ಆರ್.ನಗರ ಠಾಣೆಯ 6 ಬೈಕ್ ಕಳವು ಪ್ರಕರಣಳಿಂದ 3 ಬಂಧನ, 3.3 ಲಕ್ಷ ರೂ. ಮೌಲ್ಯದ 6 ಬೈಕ್ ವಶ, ಮೈಸೂರು ದಕ್ಷಿಣ ಠಾಣೆಯಲ್ಲಿ 9 ಬೈಕ್ ಕಳವು ಪ್ರಕರಣಗಳಲ್ಲಿ 2 ಬಂಧನ, 3.9 ಲಕ್ಷ ರೂ. ಮೌಲ್ಯದ 9 ಬೈಕ್ ವಶ, 1 ಕಳ್ಳತನ ಪ್ರಕರಣದಲ್ಲಿ 4 ಬಂಧನ, 40 ಸಾವಿರ ರೂ. ನಗದು ವಶ, ಸಾಲಿಗ್ರಾಮ ಠಾಣೆಯ 1 ಕಳ್ಳತನ ಪ್ರಕರಣದಲ್ಲಿ 1 ಬಂಧನ, 6.95 ಗ್ರಾಂ ಚಿನ್ನಾಭರಣ ವಶ, ವರುಣ ಪೆÇಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣದಲ್ಲಿ 1 ಬಂಧನ, 2.7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ, ಹುಣಸೂರು ಪಟ್ಟಣ ಠಾಣೆಯಲ್ಲಿ 1 ಬೈಕ್ ಕಳ್ಳತಮ-1, 1 ಬಂಧನ, 30 ಸಾವಿರ ರೂ. ವೌಲ್ಯದ ಬೈಕ್ ವಶ, ಬೆಟ್ಟದ ಪುರ ಠಾಣೆಯಲ್ಲಿ 1 ಕಳ್ಳತನ ಪ್ರಕರಣದಲ್ಲಿ 2 ಬಂಧನ, ನಗದು ಸೇರಿ 3.45 ಲಕ್ಷ ರೂ. ಮೌಲ್ಯದ ವಾಹನ ವಶ, ಹುಣಸೂರು ಪಟ್ಟಣ ಠಾಣೆಯಲ್ಲಿ 1 ಪ್ರಾಣಿ ಕಳವು ಪ್ರಕರಣದಲ್ಲಿ 1 ಬಂಧನ, 25 ಸಾವಿರ ರೂ. ಮೌಲ್ಯದ ಆಡು ವಶ, ನಂಜನಗೂಡು ಪಟ್ಟಣ ಠಾಣೆಯಲ್ಲಿ ಮನೆ ಕೆಲಸದವರಿಂದ ಕಳ್ಳತನ ಪ್ರಕರಣದಲ್ಲಿ ಓರ್ವನನ್ನು ಬಂಧಿಸಿ ನಗದು ಸೇರಿ 2 ಲಕ್ಷ ರೂ. ಮೌಲ್ಯದ ಗೃಹಪಯೋಗಿ ವಸ್ತು ವಶಪಡಿಸಿಕೊಳ್ಳಲಾಗಿದೆ.






























