
ಸೇಡಂ, ಜೂ 21: ಸೇಡಂನ ಮಕ್ಕಳಿಗೆ ಹಾಗೂ ಯುವಕರಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಚೀತಾ ಬ್ಯಾಡ್ಮಿಂಟನ್ ಅಕಾಡೆಮಿ ವತಿಯಿಂದ ಮೂರು ದಿನಗಳ ಕಾಲ ಉಚಿತ ಬ್ಯಾಡ್ಮಿಂಟನ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತರಬೇತುದಾರರಾದ ಶಾಂತಕುಮಾರ್ ಹಾಗೂ ರಾಧಾಕೃಷ್ಣ ತಿಳಿಸಿದ್ದಾರೆ.ಜೂನ್ 22ರಿಂದ 24ರವರೆಗೆ ನಡೆಯಲಿರುವ ಈ ಉಚಿತ ತರಬೇತಿ ಶಿಬಿರದಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳು ಹಾಗೂ ಬ್ಯಾಡ್ಮಿಂಟನ್ ಕಲಿಯಲು ಆಸಕ್ತಿ ಹೊಂದಿರುವವರು ಭಾಗವಹಿಸಬಹುದಾಗಿದೆ.ಶಿಬಿರದ ಮೂಲಕ ಕ್ರೀಡೆಯ ಮೂಲಭೂತ ತಂತ್ರಗಳು, ಫುಟ್‍ವರ್ಕ್, ಫಿಟ್ನೆಸ್ ಹಾಗೂ ಆಟದ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗುವುದು.ಇದೇ ವೇಳೆ, ಅಕಾಡೆಮಿಯ ನಿಯಮಿತ ಬ್ಯಾಡ್ಮಿಂಟನ್ ತರಬೇತಿ ತರಗತಿಗಳು ಜೂನ್ 25ರಿಂದ ಆರಂಭವಾಗಲಿವೆ. ಆರಂಭಿಕ (ಃegiಟಿಟಿeಡಿs), ಮಧ್ಯಮ (Iಟಿಣeಡಿmeಜiಚಿಣe) ಹಾಗೂ ಉನ್ನತ (ಂಜvಚಿಟಿಛಿeಜ) ಹಂತದ ಆಟಗಾರರಿಗೆ ಪ್ರತ್ಯೇಕ ತರಬೇತಿ ವ್ಯವಸ್ಥೆ ಮಾಡಲಾಗಿದೆ.
ತರಗತಿಗಳು ಪ್ರತಿದಿನ ಬೆಳಿಗ್ಗೆ 6.00 ರಿಂದ 7.15ರವರೆಗೆ ಹಾಗೂ ಸಂಜೆ 5.00 ರಿಂದ 6.15ರವರೆಗೆ ನಡೆಯಲಿವೆ. ತರಬೇತಿ ಕಾರ್ಯಕ್ರಮವು ಸೇಡಂ ತಾಲ್ಲೂಕು ಇಂಡೋರ್ ಸ್ಟೇಡಿಯಂನಲ್ಲಿ ನಡೆಯಲಿದೆ.ಅಕಾಡೆಮಿಯ ಮುಖ್ಯ ಕೋಚ್ ಹಾಗೂ ಶಾಂತಕುಮಾರ್ (ಃWಈ ಲೆವೆಲ್-1 ಪ್ರಮಾಣಿತ ಕೋಚ್) ಹಾಗೂ ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುವುದು.ಆಸಕ್ತರು ಹೆಚ್ಚಿನ ಮಾಹಿತಿಗಾಗಿ 96328 94647 ಹಾಗೂ 88808 08879 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.
ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳು ಹಾಗೂ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.


























