Home ಜಿಲ್ಲೆ ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ 2.50ಲಕ್ಷ ನೆರವು

ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ 2.50ಲಕ್ಷ ನೆರವು

ಔರಾದ್:ಮಾ.11: ತಾಲೂಕಿನ ಚಿಕ್ಲಿ(ಜೆ) ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ತಾಲೂಕಿನ ಕಾಂಗ್ರೆಸ್ ಮುಖಂಡ ಭೀಮಸೇನರಾವ ಸಿಂದೆ ಅವರು ಮಂಗಳವಾರ 2.50 ಲಕ್ಷ ನಗದು ಸಹಾಯ ನೀಡಿದರು.

ಈ ಹಿಂದೆ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ್ದ ಅವರು ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಮಂಗಳವಾರ ಚಿಕ್ಲಿ ಗ್ರಾಮಕ್ಕೆ ಭೇಟಿ ನೀಡಿ ?2 ಲಕ್ಷ 50 ಸಾವಿರ ಮೊತ್ತವನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಭೀಮಸೆನರಾವ ಸಿಂದೆ ಅವರ ಸಹಾಯವನ್ನು ಅಭಿನಂದಿಸಿ, ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಅವರು ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಚಿಕ್ಲಿ (ಜೆ ) ಗ್ರಾಮದ ವತಿಯಿಂದ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೆಂಕಟರಾವ್ ಪಾಟೀಲ್, ಸೂರ್ಯಕಾಂತ್ ಮಾಲೆ, ದೇವ್ ಮಹಾರಾಜ್ ಸುಂಕನಾಳ್, ಶ್ರೀನಿವಾಸ್ ಪಾಟೀಲ್, ಕಿಶೋರ್ ಪಾಟೀಲ್, ಸಾಯಿನಾಥ್ ಪಾಟೀಲ್ ಇದ್ದರು