
ನವದೆಹಲಿ,ಜು2:ತನಗೆ ಭಾರತೀಯ ಪೌರತ್ವ ಇದೆ ಎಂದು ಸಾಬೀತುಪಡಿಸಲು ಬರೊಬ್ಬರಿ 15 ಪ್ರಮುಖ ದಾಖಲೆಗಳನ್ನು ಒದಗಿಸಿದ್ದರೂ, ಅಸ್ಸಾಂನ ದಿನಗೂಲಿ ಕಾರ್ಮಿಕನೊಬ್ಬ ವಿದೇಶಿ ಪ್ರಜೆಯಾಗಿಯೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಈತನನ್ನು ‘ವಿದೇಶಿಗ’ ಎಂದು ಘೋಷಿಸಿದ್ದ ಫಾರಿನರ್ಸ್ ಟ್ರಿಬ್ಯೂನಲ್ ಆದೇಶವನ್ನು ಗೌಹಾತಿ ಹೈಕೋರ್ಟ್ ಎತ್ತಿಹಿಡಿದಿದೆ.
ಅರ್ಜಿದಾರರು ಸಲ್ಲಿಸಿದ ಸಾಕ್ಷ್ಯಗಳು ಮತ್ತು ದಾಖಲೆಗಳು ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ ಅಥವಾ ಪೌರತ್ವವನ್ನು ಸಾಬೀತುಪಡಿಸಲು ಅಪೂರ್ಣವಾಗಿವೆ ಎಂದು ನ್ಯಾಯಮೂರ್ತಿಗಳಾದ ಕಲ್ಯಾಣ್ ರೈ ಸುರಾನಾ ಮತ್ತು ಶಮೀಮಾ ಜಹಾನ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ಅರ್ಜಿದಾರನು ತನ್ನ ತಂದೆ ಮತ್ತು ಅಜ್ಜ-ಅಜ್ಜಿಯರ ಹೆಸರುಗಳಿದ್ದ 1951 ರ ರಾಷ್ಟ್ರೀಯ ಪೌರತ್ವ ನೋಂದಣಿ (ಓಖಅ) ಪ್ರತಿಯನ್ನು ಸಲ್ಲಿಸಿದ್ದನು. ಆದರೆ ಅದು ಡಿಜಿಟಲ್ ರೂಪದಲ್ಲಿ ರಚಿತವಾದ ಕಂಪ್ಯೂಟರ್ ಪ್ರತಿಯಾಗಿದ್ದು, ಅದಕ್ಕೆ ಸಾಕ್ಷ್ಯ ಕಾಯ್ದೆಯ (ಇviಜeಟಿಛಿe ಂಛಿಣ) ಅಡಿಯಲ್ಲಿ ಅಗತ್ಯವಿರುವ ಸೆಕ್ಷನ್ 65ಃ ಪ್ರಮಾಣಪತ್ರವನ್ನು ಲಗತ್ತಿಸಿರಲಿಲ್ಲ. ಜೊತೆಗೆ, ಜನಗಣತಿ ಕಾಯ್ದೆ 1948ರ ಪ್ರಕಾರ ಜನಗಣತಿ ದಾಖಲೆಗಳನ್ನು ಪೌರತ್ವಕ್ಕೆ ಸಾಕ್ಷಿಯಾಗಿ ಬಳಸಲಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
2017ರ ಹಶ್ದೋಬಾ ಅಂಚಲಿಕ್ ಪ್ರೌಢಶಾಲೆಯ ಪ್ರಮಾಣಪತ್ರವನ್ನು ಕೋರ್ಟ್ ತಳ್ಳಿಹಾಕಿದೆ. ಏಕೆಂದರೆ, ಈ ಪ್ರಮಾಣಪತ್ರ ನೀಡಿದ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಾಕ್ಷ್ಯ ನುಡಿಯಲು ನ್ಯಾಯಾಲಯಕ್ಕೆ ಕರೆಸಲಾಗಿರಲಿಲ್ಲ ಮತ್ತು ಶಾಲಾ ಪ್ರವೇಶಾತಿ ರಿಜಿಸ್ಟರ್ ಅನ್ನು ಹಾಜರುಪಡಿಸಿರಲಿಲ್ಲ.
1973 ರ ಅಜ್ಜನ ಹೆಸರಿನಲ್ಲಿದ್ದ ಜಮೀನು ಖರೀದಿ ಪತ್ರವನ್ನು ಸಲ್ಲಿಸಲಾಗಿದ್ದರೂ, ಆ ಜಮೀನು ತಂದೆಗೆ ಅಥವಾ ತನಗೆ ಹೇಗೆ ಹಸ್ತಾಂತರವಾಯಿತು ಎಂಬ ಕಂದಾಯ ದಾಖಲೆಗಳನ್ನು ಒದಗಿಸದ ಕಾರಣ ಅದನ್ನು ತಿರಸ್ಕರಿಸಲಾಗಿದೆ.
ಪ್ಯಾನ್ ಕಾರ್ಡ್ ಮತ್ತು ವೋಟರ್ ಐಡಿ: ಪ್ಯಾನ್ ಕಾರ್ಡ್ ಮತ್ತು ಎಲೆಕ್ಟರ್ಸ್ ಫೆÇೀಟೋ ಐಡೆಂಟಿಟಿ ಕಾರ್ಡ್ ಕೇವಲ ಗುರುತಿನ ಚೀಟಿಗಳೇ ಹೊರತು ಅವು “ಪೌರತ್ವದ ಪುರಾವೆಗಳಲ್ಲ” ಎಂದು ಹೈಕೋರ್ಟ್ ಪುನರುಚ್ಚರಿಸಿದೆ.
ಅರ್ಜಿದಾರರು 1966 ರಿಂದ 2017 ರವರೆಗಿನ ವಿವಿಧ ಮತದಾರರ ಪಟ್ಟಿಗಳನ್ನು ಸಲ್ಲಿಕೆ ಮಾಡಿದ್ದರು. ಆದರೆ, ಅವುಗಳಲ್ಲಿ ವಯಸ್ಸಿನ ವ್ಯತ್ಯಾಸಗಳು ಎದ್ದುಕಾಣುತ್ತಿದ್ದವು (ಉದಾಹರಣೆಗೆ 1979 ರಲ್ಲಿ 25 ವರ್ಷ ವಯಸ್ಸಾಗಿದ್ದ ಕುಟುಂಬದ ಸದಸ್ಯರೊಬ್ಬರ ವಯಸ್ಸು 1989 ರ ಪಟ್ಟಿಯಲ್ಲಿ ಕೇವಲ 29 ವರ್ಷ ಎಂದು ನಮೂದಾಗಿತ್ತು). ಅಲ್ಲದೆ, ಕುಟುಂಬದ ಹೆಸರುಗಳು ಬೇರೆ ಬೇರೆ ಮೂರು ಹಳ್ಳಿಗಳಲ್ಲಿ ಕಂಡುಬಂದಿದ್ದು, ಅವುಗಳ ನಡುವೆ ಯಾವುದೇ ನಿರಂತರ ಸಂಬಂಧವನ್ನು ಸಾಬೀತುಪಡಿಸಲು ಅರ್ಜಿದಾರ ವಿಫಲನಾಗಿದ್ದಾನೆ.
ಕೇವಲ ಮೌಖಿಕ ಹೇಳಿಕೆಗಳ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ವಿಚಾರಣೆಯ ವೇಳೆ ತಂದೆಯ ಹೇಳಿಕೆಗಳು ಮತ್ತು ಪ್ಯಾನ್ ಕಾರ್ಡ್‍ನಲ್ಲಿದ್ದ ಅರ್ಜಿದಾರನ ಜನ್ಮ ವರ್ಷದ (1988) ನಡುವೆ ಸಾಮ್ಯತೆ ಇರಲಿಲ್ಲ. ಗಡಿಪಾರು ಕಾಯ್ದೆ ಸೆಕ್ಷನ್ 9ರ ಪ್ರಕಾರ, ತಾನು ವಿದೇಶಿಗನಲ್ಲ, ಭಾರತೀಯ ಪ್ರಜೆ ಎಂದು ಸಾಬೀತುಪಡಿಸುವ ಸಂಪೂರ್ಣ ಜವಾಬ್ದಾರಿ ಅರ್ಜಿದಾರನ ಮೇಲಿರುತ್ತದೆ. ಈ ಜವಾಬ್ದಾರಿಯನ್ನು ನಿಭಾಯಿಸಲು ಆತ ವಿಫಲನಾಗಿದ್ದಾನೆ ಎಂದು ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.
























