Home ಜಿಲ್ಲೆ ಮೈಸೂರು 1.88 ಲಕ್ಷ ರೂ. ಮೌಲ್ಯದ ಮದ್ಯ ನಾಶ

1.88 ಲಕ್ಷ ರೂ. ಮೌಲ್ಯದ ಮದ್ಯ ನಾಶ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.09:-
ಅವಧಿ ಮೀರಿರುವ ಮತ್ತು ಮಾನವ ಸೇವನೆಗೆ ಯೋಗ್ಯವಲ್ಲದ ವೈನ್ ಮತ್ತು ಬಿಯರ್ 1205.75 ಬಲ್ಕ್ ಲೀಟರ್‍ಗಳ ರೂ.1.88 ಲಕ್ಷ ರೂ ಮೌಲ್ಯದ ಮದ್ಯವನ್ನು ನಾಶಪಡಿಸಲಾಯಿತು.


ನಗರದ ಹೊರ ವಲಯದ ಬದನಗುಪ್ಪೆ-ಕೆಲ್ಲಂಬಳ್ಳಿ ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪಾನೀಯ ನಿಗಮದ ಅವರಣದಲ್ಲಿ ಅಬಕಾರಿ ಅಧೀಕ್ಷಕರಾದ ಕೆ.ಟಿ. ವಿಜಯಕುಮಾರ್ ಅಬಕಾರಿ ನಿರೀಕ್ಷಕ ಕೆ. ತನ್ನೀರ್, ಮಳಿಗೆ ವ್ಯವಸ್ಥಾಪಕ ಜಿ.ಮಹದೇವಸ್ವಾಮಿ ಅವರ ಸಮ್ಮಖದಲ್ಲಿ ಮದ್ಯವನ್ನು ನೆಲಕ್ಕೆ ಸುರಿದು ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಅಬಕಾರಿ ನಿಗಮದ ಸಹಾಯಕ ವ್ಯವಸ್ಥಾಪಕ ದಿನೇಶ್ ಗ್ರಾಮ ಆಡಳಿತಾಧಿಕಾರಿಗಳಾದ ಜಯರಾಮು, ಎಂ.ಮಹೇಶ್‍ಕುಮಾರ್ ರಾಜೇಶ್‍ನಾಯಕ ಇತರರು ಇದ್ದರು.