Home ಜಿಲ್ಲೆ ಬೆಂಗಳೂರು ಚಂದ್ರನ್ ಜೈ ಭೀಮ್ ಭಾರತ ಸಂಘಟನೆ ಜಿಲ್ಲಾಧ್ಯಕ್ಷ

ಚಂದ್ರನ್ ಜೈ ಭೀಮ್ ಭಾರತ ಸಂಘಟನೆ ಜಿಲ್ಲಾಧ್ಯಕ್ಷ

filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.185035; highlight: 1; algolist: 0; multi-frame: 1; brp_mask: 8; brp_del_th: 0.0064,0.0000; brp_del_sen: 0.1300,0.0000; delta:1; bokeh:1; ispap:1; papproctime: 2026:06:09 11:12:07; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 116.0;aec_lux_index: 0;albedo: ;confidence: ;motionLevel: 0;weatherinfo: null;temperature: 42;zeissColor: bright;

ಕೋಲಾರ,ಜೂ,೧೦- ಜೈ ಭೀಮ್ ಭಾರತ ಸಂಘಟನೆಯ ಕೋಲಾರ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಗಂಗಮ್ಮನಪಾಳ್ಯದ ಎಂ. ಚಂದ್ರನ್ ಅವರನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಧ್ಯಕ್ಷರಾದ ನರಸಾಪುರ ಎಸ್. ನಾರಾಯಣಸ್ವಾಮಿ ಅವರು ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ.


ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಅಧ್ಯಕ್ಷರು, ಸಂಘಟನೆಯಲ್ಲಿ ಜಾತಿ, ಮತ, ಭಾಷೆ ಹಾಗೂ ಧರ್ಮಗಳ ಯಾವುದೇ ಭೇದಭಾವವಿಲ್ಲದೆ, ಎಲ್ಲಾ ಸಮುದಾಯಗಳ ಬಡವರ ಪರವಾಗಿ ನಿರಂತರ ಹೋರಾಟಗಳನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು. ಅಲ್ಲದೆ, ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಹೆಚ್ಚಿನ ಒತ್ತು ನೀಡಬೇಕೆಂದು ಅವರು ನೂತನ ಪದಾಧಿಕಾರಿಗಳಿಗೆ ಹೇಳಿದರು.


ಈ ಮಹತ್ವದ ನೇಮಕಾತಿ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ರಾಮಸಂದ್ರ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮಾದವ ಗುರ್ಜೇನಹಳ್ಳಿ ಪ್ರವೀಣ್ ಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.