Home ಜಿಲ್ಲೆ ಹೊಸಪೇಟೆ. ನಗರದಲ್ಲಿ ಸಡಗರ ಸಂಭ್ರಮದಿಂದ ಗೌತಮ ಬುದ್ದ ಜಯಂತಿ ಆಚರಣೆ

ಹೊಸಪೇಟೆ. ನಗರದಲ್ಲಿ ಸಡಗರ ಸಂಭ್ರಮದಿಂದ ಗೌತಮ ಬುದ್ದ ಜಯಂತಿ ಆಚರಣೆ

ಹೊಸಪೇಟೆ.ಮೇ,2-  ನಗರದಲ್ಲಿ ಶುಕ್ರವಾರ  ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಸಿದ್ಧಾರ್ಥ ಗೌತಮ ಬುದ್ಧ ಅವರ 2570ನೇ ಜಯಂತಿಯನ್ನು ಅತ್ಯಂತ ಸಡಗರ ಸಂಭ್ರಮ ಮತ್ತು ಭಕ್ತಿಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ನಗರದ ಜೈ ಭೀಮ್ ವೃತ್ತದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗಣ್ಯರು ಮತ್ತು ಸಂಘಟನೆಯ ಪದಾಧಿಕಾರಿಗಳು ಬುದ್ಧ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ತೆರೆದ ವಾಹನದಲ್ಲಿ ಸಿದ್ದಾರ್ಥ ಗೌತಮ ಬುದ್ಧ, ಸಾಂಸ್ಕೃತಿಕ ನಾಯಕ ಬಸವಣ್ಣ, ಬಾಬಾಸಾಹೇಬ್ ಅಂಬೇಡ್ಕರ ಅವರ ಭಾವಚಿತ್ರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಿ ಹರಿಹರ ರಸ್ತೆಯಲ್ಲಿರುವ ಸಿದ್ದಾರ್ಥ ಗೌತಮ ಬುದ್ಧ ವೃತ್ತ ತಲುಪಿತು.

ಮೆರವಣಿಗೆಯುದ್ದಕ್ಕೂ ಬೌದ್ಧ ಧರ್ಮದ ನೀಲಿ ಮತ್ತು ಪಂಚಶೀಲ ಧ್ವಜಗಳನ್ನು ಕಾರ್ಯಕರ್ತರು ಪ್ರದರ್ಶಿಸಿದರು.  ನಂತರ ಹರಿಹರ ರಸ್ತೆಯಲ್ಲಿರುವ ಗೌತಮ ಬುದ್ಧ ವೃತ್ತದಲ್ಲಿ ಸಮೂಹ ಬುದ್ಧ ವಂದನೆಯನ್ನು ಅರ್ಪಿಸಲಾಯಿತು. ನೆರೆದಿದ್ದ ಎಲ್ಲರೂ ಬುದ್ಧಂ ಶರಣಂ ಗಚ್ಛಾಮಿ ಎಂಬ ಪಠಣದೊಂದಿಗೆ ವಿಶ್ವಶಾಂತಿಗಾಗಿ ಪ್ರಾರ್ಥಿಸಿದರು. ಇಂದಿನ ಜಾಗತಿಕ ಸಂಘರ್ಷಗಳ ನಡುವೆ ಬುದ್ಧನ ಅಹಿಂಸೆ ಮತ್ತು ಕರುಣೆಯ ತತ್ವಗಳು ಅತ್ಯಂತ ಪ್ರಸ್ತುತವಾಗಿವೆ” ಎಂಬ ಅಂಶವನ್ನು ಪಾಲ್ಗೊಂಡಿದ್ದ ಹಿರಿಯ ಹೋರಾಟಗಾರರು ಮತ್ತು ಪ್ರಗತಿಪರ ಚಿಂತಕರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚಿನ್ನಸ್ವಾಮಿ ಸೋಸಲೆ,  ಜಿಲ್ಲಾ ಸಂಘಟಕ ಸೋಮಶೇಖರ್ ಬಣ್ಣದಮನೆ, ಸಾಹಿತಿÀ ಪೀರ್ ಬಾಷಾ, ಆರೋಗ್ಯ ಇಲಾಖೆಯ ಎಂ.ಪಿ.ದೊಡ್ಮನಿ, ಧರ್ಮನಗೌಡ, ಮುಖಂಡರಾದ ಸೂರ್ಯ ನಾರಾಯಣ ಲಕ್ಷ್ಮಣ್, ಜಿ.ಶಿವಕುಮಾರ್,  ಎಂ.ಬಸವರಾಜ್, ಜೆ, ಸಿ.ಈರಣ್ಣ, ರಾಮಚಂದ್ರ ಬಾಬು, ಮರಿಸ್ವಾಮಿ, ಪ್ರಕಾಶ್, ಮುದುಕಪ್ಪ, ಸುನಿಲ್, ಹನುಮಂತ, ರಮೇಶ್, ಕೆಸಿ ಚಂದ್ರ, ಪಿಡಿಓ ಉಮೇಶ್, ಎನ್.ವೆಂಕಟೇಶ್, ಸಣ್ಣ ಮಾರಪ್ಪ ಸೇರಿದಂತೆ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.