
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.15: ನಗರದ ವೀಭದ್ರೇಶ್ವರ ಸ್ವಾಮಿ ಜಯಂತೋತ್ಸವ ಸಮಿತಿಯಿಂದ ಇಂದು 7ನೇ ವರ್ಷದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವವನ್ನು ಇಂದು ಇಲ್ಲಿನ ಪಾರ್ವತಿ ನಗರದ ಅನಾದಿ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿತ್ತು.
ಇದರಂಗವಾಗಿ ಇಂದು ಬೆಳಿಗ್ಗೆ ನಗರದ
ಕನಕ ದುರ್ಗಮ್ಮ ದೇವಸ್ಥಾನದಿಂದ- ಅನಾದಿಲಿಂಗೇಶ್ವರ ದೇವಸ್ಥಾನದಲ್ಲಿನ ವೀರಭದ್ರೇಶ್ವರ ಸನ್ನಿಧಾನಕ್ಕೆ ವೀರಭದ್ರೇಶ್ವರ ಭಾವಚಿತ್ರದ ಮೆರವಣಿಗೆ ಗಂಗೆ ಕೊಡದೊಂದಿಗೆ ಕುಂಬ ಕಳಸ, ವೀರಗಾಸೆ, ನಂದಿಕೋಲು,ಸಮಾಳ ವಾದನದ ಮೂಲಕ ಮೆರವಣಿಗೆಯಲ್ಲಿ ತೆರಳಲಾಯ್ತು.
ಹರಗಿನದೋಣಿ ಮಠದ, ಕಲ್ಯಾಣ ಮಠದ ಶ್ರೀಗಳ ಸಾನಿಧ್ಯದಲ್ಲಿ 501 ಮುತ್ತೈದೆಯರಿಗೆ ಹಸಿರುಸೀರೇ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಿತು, ನಂತರ ಪರಮಪೂಜ್ಯರಿಂದ ಆಶೀರ್ವಾಚನ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.
ಜನ ಕಲ್ಯಾಣ ರಕ್ಷಣಾ ವೇದಿಕೆ, ಬಳ್ಳಾರಿ ಜಿಲ್ಲಾ ವೀರಶೈವ ಜಂಗಮ ಅರ್ಚಕ ಮತ್ತು ಪುರೋಹಿತರ ಸಂಘ, ಮರಿಸ್ಮವಾಮಿಗಳ ಮಠದ ಭಕ್ತರು ಪಾಲ್ಗೊಂಡಿದ್ದರು.































