Home ಜಿಲ್ಲೆ ರಾಜ ದರ್ಬಾರ್ ಕಲಾಕೃತಿಯಲ್ಲಿ ರಾರಾಜಿಸುತ್ತಿರುವ ಗಣಪ

ರಾಜ ದರ್ಬಾರ್ ಕಲಾಕೃತಿಯಲ್ಲಿ ರಾರಾಜಿಸುತ್ತಿರುವ ಗಣಪ

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ. ಸೆ.15 ಪಟ್ಟಣದ ರಾಮನಗರ ಮಿಲ್ಟ್ರಿ ಬಯಲಿನಲ್ಲಿ ಬೆನಕ ಗ್ರೂಪ್ ವತಿಯಿಂದ 29ನೇ ವರ್ಷದ ಗಣೇಶೋತ್ಸವವನ್ನು ರಾಜ ದರ್ಬಾರ್ ಮಾದರಿಯಲ್ಲಿಸೆಟ್ ನ್ನು ನಿರ್ಮಿಸಿ ಅದರಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತದೆ. ಕಳೆದ ವರ್ಷ ಅಯೋಧ್ಯ ಮಾದರಿಯ ಸೆಟ್ ನಿರ್ಮಿಸಿ ಭಕ್ತಾದಿಗಳ ಪ್ರಸಂಶೆ ಕಂಡುಬಂದಿತು. ಈ ವರ್ಷವೂ ಏನಾದರೂ ವಿಶೇಷ ಮಾಡಬೇಕು  ಎಂದು ಬೆನಕ ಗ್ರೂಪಿನ ಸದಸ್ಯರು ಮಾತಾಡಿಕೊಂಡು ಈ ಬಾರಿ ರಾಜ ದರ್ಬಾರ್ ನಿರ್ಮಿಸಿದ್ದಾರೆ. ಸುಮಾರು 10 ಲಕ್ಷ ರೂ. ಖರ್ಚು ಮಾಡಿ ಸುಂದರವಾಗಿ ರಾಜ ದರ್ಬಾರದಂತೆ ಕಲಾಕೃತಿ ನಿರ್ಮಿಸಿರುವುದು ಸಾರ್ವಜನಿಕರನ್ನು ಸೆಳೆಯುತ್ತದೆ. ಭಕ್ತಾದಿಗಳು ತಂಡೋಪ ತಂಡವಾಗಿ  ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಕಣ್ಣು ತುಂಬಿ ಕೊಳುತ್ತಿದ್ದಾರೆ. ಕಣ್ಮನ ಸೆಳೆಯುವಂತೆ ನಿರ್ಮಿಸಿರುವ ಬೆನಕ ಗ್ರೂಪಿನ ಎಲ್ಲಾ ಸದಸ್ಯರನ್ನು ಹೊಗಳುತ್ತಿದ್ದಾರೆ.