
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.05.. ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವಕರಲ್ಲಿ ಕಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕೆಂದು ಕಾಂಗ್ರೇಸ್ ಮುಖಂಡರು ಹೊನ್ನಪ್ಪ ಅಭಿಪ್ರಾಯ ತಿಳಿಸಿದರು. ವೈ.ಎನ್. ಆರ್. ಗೌಡ ಈಜುಕೇಷನಲ್, ಕಲ್ಚರಲ್ ಟ್ರಸ್ಟ್ ಅಮರಾಪುರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಅಡಿಯಲ್ಲಿ ಹೊಂಗಿರಣ ರಂಗಮಂದಿರದಲ್ಲಿ ಹಮ್ಮಿಕೊಂಡ ರಂಗ ಸಂಭ್ರಮ ನಾಟಕೋತ್ಸವದಲ್ಲಿ ಅವರು ಹರ್ಮೋನಿ ವಾದ್ಯ ಬಾರಿಸಿ ಚಾಲನೆ ನೀಡಿದರು. ಕಲೆಗಳ ಪ್ರೋತ್ಸಾಹಕ್ಕೆ ನಮ್ಮ ಸಹಕಾರ ಇರುತ್ತೆ ಎಂದು ಪ್ರದೇಶ್ ಕುರುಬರ ಸಂಘದ ಅಧ್ಯಕ್ಷ ಬಿ. ಎಂ. ಪಾಟೀಲ್ ಹೇಳಿದರು. ಟ್ರಸ್ಟ್ ವತಿಯಿಂದ ಅತಿಥಿ ಗಳನ್ನು ಸನ್ಮಾನಿಸಿದರು. ನಂತರ ಡಾ. ಪಿ. ಎಲ್.ಗಾದಿ ಲಿಂಗನ ಗೌಡ ತಂಡ ದಿoದ ಕೃಷ್ಣನ ಶಯನ ಗೃಹ ಪೌರಾಣಿಕ ನಾಟಕ ಮನೋಜ್ಞವಾಗಿ ಪ್ರದರ್ಶನ ಮಾಡಿದರು . ಕಲಾವಿದರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಅಭಿಷೇಕ್ ತಂಡದ ಜನಪದ ನೃತ್ಯ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು. ಕೃಷ್ಣನ ಪಾತ್ರದಲ್ಲಿ ಟಿ.ನಾಗಭೂಷಣ್, ದುರ್ಯೋಧನ ನಾಗಿ ಗಾದಿಲಿಂಗನ ಗೌಡ , ಅರ್ಜುನನಾಗಿ ವಿ.ರಾಮಚಂದ್ರ, ಸಾತ್ಯಕಿಯಾಗಿ ವೈ. ನಾಗರಾಜು ತಮ್ಮ ಪಾತ್ರದಿಂದ ಪ್ರೇಕ್ಷಕರನ್ನು ರಂಜಿಸಿದರು. ನಾಗಭೂಷಣ್ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಿವರುದ್ರಯ್ಯ, ಟ್ರಸ್ಟ್ ಅಧ್ಯಕ್ಷರು ಲಕ್ಷ್ಮಿ, ಕಾರ್ಯದರ್ಶಿ ಉಮಾಪತಿ, ಉಪಾಧ್ಯಕ್ಷ ನಾಗರಾಜು, ಕೆ. ಸಿ.ಸುಂಕಣ್ಣ, ಶಿವಂ ಡ್ಯಾನ್ಸ್ ಅಕಾಡಮಿಯ ಕಟ್ಟೆ ಬಸವ, ಮಂಜುನಾಥ್, ಚಂದ್ರ ಶೇಖರ್ ಸ್ವಾಮಿ, ರಂಗಾರೆಡ್ಡಿ, ಮುಂತಾದವರು ಇದ್ದರು…






















