
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಎ,13- ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಬಳಿಯ ಸರ್ಕಲ್ ನಲ್ಲಿ ಇಂದು ಮಧ್ಯಾಹ್ನ ಬ್ರೇಕ್ ಇಲ್ಲದೇ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಡಿ ಸಿಲುಕಿ ಯುವಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಕೆಎ34 ಇಡಬ್ಲು 6076 ಎಲೆಕ್ಟ್ರಿಕಲ್ ಏಥರ್ ಬೈಕ್ ನ್ನು ತೆಗೆದುಕೊಂಡು ರಂಗಮಂದಿರದ ಕಡೆಯಿಂದ ಬಸ್ ನಿಲ್ದಾಣದ ಕಡೆ ಬರುತ್ತಿದ್ದ ಯುವಕ, ಕೂರಿಗನೂರಿನಿಂದ. ನಗರಕ್ಕೆ ಬಂದ ಕೆ34 ಎಫ್ 1211 ಬಸ್ ಬರುವುದನ್ನು ಲೆಕ್ಕಿಸದೇ ಲಾರಿ ಮತ್ತು ಬಸ್ ನಡುವೆ ತೂರಿದ್ದಾನೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಮೇಲೆ ಏರಿದೆ. ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ.
ಮೃತ ಯುವಕ ಆಂಧ್ರ ಪ್ರದೇಶದ ಬೊಮ್ಮನಹಾಳ್ ಗ್ರಾಮದ ರವಿ ಎಂದು ತಿಳಿದುಬಂದಿದೆ.
ಬಸ್ ನ ಬ್ರೇಕ್ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಚಾಲಕ ವೀರನಗೌಡ, ಡಿಪೋದಲ್ಲಿನ ವಾಹನ ಪರೀಕ್ಷಕ ರಾಂಪುರ ಸುರೇಶ್ ಅವರಿಗೆ ದೂರು ನೀಡಿದ್ದೆ. ಆದರೆ ಅವರು ನಾಳೆ ಸರಿ ಪಡಿಸುವುದಾಗಿ ಹೇಳಿ ನಿನ್ನೆ ಕಳಿಸಿದ್ದರು. ಎಂದು ವೀರನಗೌಡ ಸಂಜೆವಾಣಿಯೊಂದಿಗೆ ಮಾತನಾಡುವಾಗ ಲಾಗ್ ಚೀಟಿಯಲ್ಲಿ ಬರೆದಿರುವುದನ್ನು ತೋರಿಸಿ ಹೇಳಿದ್ದಾರೆ.
ಚಾಲಕನ ನಿಯಂತ್ರಣ ಇಲ್ಲದೆ ಯುವಕಸಾವನ್ನಪ್ಪಿದ್ದಾನೆ. ಏನಾದರೂ ಬಸ್ ನಲ್ಲಿ ಹತ್ತಾರು ಜನರಿರುವಾಗ ಆಗಿದ್ದರೆ ಅವರ ಪ್ರಾಣಕ್ಕೆ ಯಾರು ಹೊಣೆ.
ಇತ್ತೀಚೆಗಷ್ಟೇ ಮೋತಿ ಸರ್ಕಲ್ ನಲ್ಲಿ ಬ್ರೇಕ್ ಫೇಲಾಗಿ ಹಣ್ಣಿನ ಅಂಗಡಿಗಳ ಮೇಲೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಕಬ್ಬಿಣದ ಕಂಬಕ್ಕೆ ತಾಗಿದ್ದರಿಂದ ಯಾರಿಗೂ ಪ್ರಾಣಾಪಾಯ ಆಗಿರಲಿಲ್ಲ.
























