
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.14: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ. ಡಿಜಿ ಸಾಗರ ಬಣ)ಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವವನ್ನು ಇಂದು ಅಂಬೇಡ್ಕರ್ ಭವನದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ. ಎ.ಮಾನಯ್ಯ ರಾಜ್ಯ ಸಂಘಟನಾ ಸಂಚಾಲಕರು. ಸಿ. ನರಸಪ್ಪ. ಚಲುವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷರು. ಮಲ್ಲಯ್ಯ ಕೊಳಗಲ್ಲು. ಜಿಲ್ಲಾ ಸಂಘಟನಾ ಸಂಚಾಲಕರು. ಹೆಚ್. ಆಂಜನೇಯ ಎಂ. ಗೋನಾಳ್. ಜಿಲ್ಲಾ ಸಂಘಟನಾ ಸಂಚಾಲಕರು. ಮುಖಂಡರುಗಳಾದ ಟಿ.ಎಂ. ಎರ್ರಿಸ್ವಾಮಿ. ಬಿ..ರಮೇಶ. ಹೆಚ್. ಶಂಕರ ಬಾಪೂಜಿನಗರ.ಹೆಚ್. ಮಲ್ಲಪ್ಪ. ಸಿದ್ದಾರ್ಥ್ (ಸೋನು)ಹನುಮಂತ ಬೂದಿಹಾಳ್. ದುರ್ಗಾದಾಸ್. ಎರ್ರಿಸ್ವಾಮಿ ಜೋಳದರಾಶಿ. ಗಂಗಾಧರ ಚೆಳ್ಳಗುರ್ಕಿ. ತಿರುಮಲ ಎರಗುಡಿ. ಹನುಮಂತ ಯಾಲ್ಪಿ. ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






















