Home ಜಿಲ್ಲೆ ಮಂಗಳೂರು ಡಾ.ತುಂಬೆ ಮೊಯ್ದಿನ್‌ಗೆ ‘ಜಾಗತಿಕ ನಾಯಕತ್ವ ಪ್ರಶಸ್ತಿ ಪ್ರದಾನ

ಡಾ.ತುಂಬೆ ಮೊಯ್ದಿನ್‌ಗೆ ‘ಜಾಗತಿಕ ನಾಯಕತ್ವ ಪ್ರಶಸ್ತಿ ಪ್ರದಾನ

ಮಂಗಳೂರು: ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಮತ್ತು ಬ್ಯಾರೀಸ್ ಕಲ್ಚರಲ್ ಫೋರಂ(ಬಿಸಿಎಫ್) ಸಂಸ್ಥಾಪಕ, ಪೋಷಕ ಡಾ.ತುಂಬೆ ಮೊಯ್ದಿನ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸಹಿತ ಗಣ್ಯರು ‘ಜಾಗತಿಕ ನಾಯಕತ್ವ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.ಯುಎಇಯ ಬ್ಯಾರೀಸ್ ಕಲ್ಚರ್ ಫೋರಂ ಮತ್ತು ಮಂಗಳೂರಿನ ಬ್ಯಾರೀಸ್ ಕಲ್ಚರಲ್ ಫೋರಂ ಟ್ರಸ್ಟ್ ನಗರದ ಪುರಭವನದಲ್ಲಿ ಭಾನುವಾರ ಆಯೋಜಿಸಿದ ‘ವಿದ್ಯಾರ್ಥಿ ವೇತನ ಮತ್ತು ಹೊಲಿಗೆ ಯಂತ್ರಗಳ ವಿತರಣೆ’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಡಾ.ಮೊಯ್ದಿನ್ ವೈಯಕ್ತಿಕವಾಗಿ ೧.೫೦ ಕೋಟಿ ರು. ಮೌಲ್ಯದ ವಿದ್ಯಾರ್ಥಿ ವೇತನವನ್ನು ತುಂಬೆ ಇಂಟರ್‌ನ್ಯಾಷನಲ್ ಪಾತ್‌ವೇ ಪ್ರೋಗ್ರಾಂ(ಟಿಐಪಿಪಿ) ಮೂಲಕ ವಿತರಿಸಿದರು. ಇದು ಆರು ವರ್ಷದ ಎಂ.ಡಿ. ಕೋರ್ಸ್‌ನ ಮೊತ್ತವಾಗಿದೆ. ಈ ವಿದ್ಯಾರ್ಥಿಗಳು ಅಜ್ಞಾನ್‌ನ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷ ಪೂರ್ಣಗೊಳಿಸಿದ್ದಾರೆ.
ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಬಿ. ಎಂ. ಫಾರೂಕ್, ಪ್ರೆಸಿಡೆನ್ಸಿ ವಿವಿ ಕುಲಪತಿ ನಿಸಾರ್ ಅಹ್ಮದ್ ಸಹಿತ ಗಣ್ಯರು ಭಾಗವಹಿಸಿದ್ದರು.