Home ಜಿಲ್ಲೆ ಮೈಸೂರು ಜನರಲ್ಲಿ ಉಳಿತಾಯ ಮನೋಭಾವನೆ, ಆರ್ಥಿಕ ಪ್ರಗತಿಗೆ ಹೆಚ್ಚಿನ ಒತ್ತು: ದಿನೇಶ್ ಗುಪ್ತಾ

ಜನರಲ್ಲಿ ಉಳಿತಾಯ ಮನೋಭಾವನೆ, ಆರ್ಥಿಕ ಪ್ರಗತಿಗೆ ಹೆಚ್ಚಿನ ಒತ್ತು: ದಿನೇಶ್ ಗುಪ್ತಾ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.29-
ಜಿಲ್ಲೆಯ ಜನರಲ್ಲಿ ಉಳಿತಾಯ ಮನೋಭಾವನೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸೇರಿದಂತೆ ಶೇ. 7ರ ಬಡ್ಡಿ ದರದಲ್ಲಿ ಠೇವಣಿ ಸ್ವೀಕಾರ ಮಾಡುವ ಮೂಲಕ ಜಿಲ್ಲೆಯ ಆರ್ಥಿಕ ಪ್ರಗತಿಗೆ ಐಗಿರಿ ಸೌಹಾರ್ದ ಕೋ. ಅಪರೇಟವ್ ಸೊಸೈಟಿ ಕಾರ್ಯನಿರ್ವಹಿಸಲಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರ ಸಂಯುಕ್ತ ಮಾಜಿ ನಿರ್ದೇಶಕ ಆರ್. ದಿನೇಶ್ ಗುಪ್ತಾ ತಿಳಿಸಿದರು.


ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರದಲ್ಲಿ ಐಗಿರಿ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ ಉದ್ಗಾಟನೆ ಕುರಿತು ಮಾಹಿತಿ ನೀಡಿದರು.
ಈಗಾಗಲೇ 700ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, 16 ಲಕ್ಷಕ್ಕು ಹೆಚ್ಚು ಷೇರು ಸಂಗ್ರಹಿಸಲಾಗಿದೆ. ಸೌಹಾರ್ದ ಸಹಕಾರ ಸಂಘದ ಮೂಲಕ ಸದಸ್ಯರಲ್ಲಿ ಆರ್ಥಿಕ ಶಿಸ್ತು ರೂಪಿಸಿವುದು. ಸದಸ್ಯರ ವಿಶ್ವಾಸ, ಪಾರದರ್ಶಕ ಆಡಳಿತ ಹಾಗೂ ಸೇವಾ ಮನೋಭಾವಕ್ಕೆ ಆದ್ಯತೆ ನೀಡುವ ಮೂಲಕ ಸಂಸ್ಥೆಯನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಆಡಳಿತ ಮಂಡಳಿ ಉದ್ದೇಶಿಸಿದೆ ಎಂದು ಹೇಳಿದರು.


ನಾಳೆ ಉದ್ಘಾಟನೆ :
ನಗರದಲ್ಲಿ ಐಗಿರಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅ.30 ರಂದು ಶುಕ್ರವಾರ ಬೆಳಗ್ಗೆ 11 ಗಂಟಗೆ ಉದ್ಘಾಟನೆಗೊಳ್ಳಲಿದೆ. ನಗರದ ಹಳೆಯ ಬಸ್ ನಿಲ್ದಾಣದ ಸಮೀಪದ ಮಾರಮ್ಮ ದೇವಸ್ಥಾನದ ಎದುರಿನ ಚಿರಂತ್ ಆರ್ಕೇಡ್‍ನಲ್ಲಿ ಸೊಸೈಟಿ ಕಚೇರಿಯನ್ನು ಆರಂಭಿಸಿದ್ದು, ಜಾ.ನಗರ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ‘ಮಠ ಅಧ್ಯಕ್ಷರಾದ ಶ್ರೀ ಚೆನ್ನಬಸವಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಸಮಾರಂಭವÀನ್ನು ಉದ್ಘಾಟಿಸಲಿದ್ದಾರೆ. ಐಗಿರಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯನ್ನು ಮಾಜಿ ಶಾಸಕ ಎಸ್. ಬಾಲರಾಜ್ ಜ್ಯೋತಿ ಬೆಳಗಿಸಲಿದ್ದಾರೆ. ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದರು.


ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಎನ್. ಬಲರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದಿನೇಶ್ ಗುಪ್ತಾ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸೊಸೈಟಿ ಉಪಾಧ್ಯಕ್ಷ ಆರ್.ಪಿ.ಸುರೇಶ್, ನಿರ್ದೇಶಕರಾದ ಮಹೇಶ್ ಕುಮಾರ್, ನಟರಾಜ್ ಗೌಡ್ರು, ಉಮ್ಮತ್ತೂರು ಮಹೇಶ್, ವಿಜಯ ಕುಲಾಲ್, ಎನ್. ಶಿವಕುಮಾರ್, ಸೂರ್ಯನಾರಾಯಣ, ಮುಖ್ಯ ಕಾರ್ಯನಿರ್ವಾಹಕ ಎನ್. ಮಧು ಇತರರು ಇದ್ದರು.