Home ಜಿಲ್ಲೆ ಚೈತ್ರ ಸಂಸ್ಕೃತ ಶಿಬಿರದಲ್ಲಿ ಪ್ರಜ್ವಲಿಸಿದ ಮಕ್ಕಳು

ಚೈತ್ರ ಸಂಸ್ಕೃತ ಶಿಬಿರದಲ್ಲಿ ಪ್ರಜ್ವಲಿಸಿದ ಮಕ್ಕಳು

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.14: ಶ್ರೀ ಸನಾತನ ವೀರಶೈವ ಗುರುಕುಲಮಠ ಟ್ರಸ್ಟ್ ಹಾಗೂ ಸಂಸ್ಕೃತ ಭಾರತಿ ಕರ್ನಾಟಕ ಉತ್ತರದಿಂದ  ಮಕ್ಕಳಿಗಾಗಿ ಕಳೆದ ಹತ್ತು ತಿಂಗಳಿಂದ  ಈ ವರ್ಷದ   *ಚೈತ್ರ ಸಂಸ್ಕೃತ* ಶಿಬಿರದ ಸಮಾರೋಪ ಸಮಾರಂಭ ನಿನ್ನೆ ಸಂಜೆ  ರೇಣುಕಾಚಾರ್ಯ ನಗರದ  ಸನಾತನ ಗುರುಕುಲ ಮಠದ ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಸಾನಿದ್ಯವನ್ನು ವೇದಮೂರ್ತಿ ಡಾ. ಜೆ.ಯಂ ಪಂಪಾಪತಿ ಶಾಸ್ತ್ರಿಗಳು ಸಂಸ್ಥಾಪಕ ಅಧ್ಯಕ್ಷರು ಶ್ರೀ ಸನಾತನ ವೀರಶೈವ ಗುರುಕುಲ ಮಠ ಟ್ರಸ್ಟ್ ಇವರು ವಹಿಸಿದ್ದರು

ಶಿಬಿರದ ಮಾರ್ಗದರ್ಶಕರಲ್ಲಿ ಒಬ್ವರಾಗಿದ್ದ ನಿವೃತ್ತ ದೈಹಿಕ ಶಿಕ್ಷಕ  ಸಿದ್ದಲಿಂಗ ಸ್ವಾಮಿ ಮಾತನಾಡಿ. ಮಕ್ಕಳಿಗಾಗಿ ಕಥೆಯ ಮೂಲಕ ಸಂಸ್ಕೃತ, ಸಂಸ್ಕಾರ, ಸಂಸ್ಕೃತಿಯ ವಿಚಾರದ ಬಗ್ಗೆ ತಿಳಿಸುವುದರ ಜೊತೆಗೆ ದರೋಜಿ ಕೆರೆ, ಗೋಶಾಲೆ ವೀಕ್ಷಣೆ ಮಾಡಿಸಲಾಗಿದೆ.  ಇದೊಂದು ಉತ್ತಮ ಶಿಬಿರ ಎಂದರು.

ವೀರಶೈವ ಸಮಾಜದ ಮುಖಂಡ ಕೆ.ಎಂ.ಮಹೇಶ್ವರ ಸ್ವಾಮಿ ಮಾತನಾಡಿ, ಯೋಗೇಶ್ ಅವರು ಇಂತಹ ಉತ್ತಮವಾದ ಶಿಬಿರವನ್ನು ಮಕ್ಕಳಿಗೆ ಆಯೋಜಿಸಿರುವುದು ಶ್ಲಾಘನೀಯ ಶಿಕ್ಷಣ ಕಲಿತವ ಭ್ರಷ್ಟನಾಗಬಹುದು. ಸಂಸ್ಕಾರ ಕಲಿತವ ಮಾತ್ರ ಭ್ರಷ್ಟನಾಗಲಾರ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ ಮಾತನಾಡಿ, ಕಲೆ, ಸಂಸ್ಕೃತಿ ಜೊತೆಗೆ ಮಕ್ಕಳು ಸಂಸ್ಕೃತ ಭಾಷೆಯನ್ನು ಕಲಿಯುವ   ಹತ್ತ  ದಿನಗಳ ಶಿಬಿರ ಸಾರ್ಥಕತೆಯಿಂದ ಕೂಡಿದೆಂದರು.

ಮಕ್ಕಳು ತಾವು ಹತ್ತು ದಿನಗಳ ಕಾಲ ಕಲಿತ ಸಂಸ್ಕೃತದಲ್ಲಿ ಹಾಡು, ಶ್ಲೋಕ, ಸಂಖ್ಯೆ ಜೊತೆಗೆ ಕಿರು ನಾಟಕಗಳ ಪ್ರದರ್ಶನ ಮಾಡಿ ಪೋಷಕರ ಗಮನ ಸೆಳೆದರು.ಸಾಧನಾ ಯೋಗ ಕೇಂದ್ರದಿಂದ ತರಬೇತಿ ಪಡೆದ  ಮಕ್ಕಳು ಯೋಗ ಪ್ರದರ್ಶನ ಮಾಡಿದರು.

ಸಮಾರಂಭದಲ್ಲಿ ಪಾಲ್ತೂರು ಶ್ರೀಗಳು, ಪಾಲಿಕೆ ಸದಸ್ಯೆ ಸುರೇಖ ಮಲ್ಲನಗೌಡ, ಸಿಮೆಂಟ್ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ,  ಸಿದ್ಧಾಂತ ಶಿಖಾಮಣಿ ಬೋಧಕಿ ಅನುರಾಧ ಕೆ. ಎಂ., ಸಂಸ್ಕೃತ ಶಿಕ್ಷಕಿ ಚೆನ್ನಮ್ಮ, ಎಂ ಚಂದ್ರ ಮೌಳಿ, ಜೋಳದರಾಶಿ ಬಸವರಾಜ್, ಎರ್ರಿಸ್ವಾಮಿ, ಶಿವೇಶ್ವರಗೌಡ, ಶಿವಾನಂದ ಸ್ವಾಮಿ ಬೆಳಗಲ್, ಎಣ್ಣೆ ಎರ್ರಿಸ್ವಾಮಿ, ಓಂಕಾರಸ್ವಾಮಿ ಮಿಂಚೇರಿ, ಮೊದಲಾದವರು  ಪಾಲ್ಗೊಂಡಿದ್ದರು.

ಮಹಾಂತೇಶ ಮೂರ್ತಿ ಕೆ.ಎಂ. ನಿರೂಪಣೆ ಮಾಡಿದರು.ವೈಷ್ಣವಿ ಪ್ರಾರ್ಥನೆ ಮಾಡಿದರು. ಶಿಕ್ಷಕ  ಎಸ್.ಎಂ. ಸಿದ್ದೇಶ್ವರ ವಂದನಾರ್ಪಣೆ ಮಾಡಿದರು.