
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಮೇ,2-ತಾಲೂಕಿನ ಕೊಳಗಲ್ಲು ಬಳಿಯ ಕೃಷ್ಣನಗರ ಕ್ಯಾಂಪ್ ನಲ್ಲಿ ಎ. 24 ರಂದು. ಡಾ.ಬಿ.ಆರ್.ಅಂಬೇಡ್ಕರ್ ನಾಮ ಫಲಕವನ್ನು ಕೆಡವಿ ಅವಮಾನದ ಮಾಡಿರುವುದನ್ನು ಬಳ್ಳಾರಿ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘ ಖಂಡಿಸಿದ್ದು. ಈ ಕೃತ್ತ ಎಸಗಿದವರ ವಿರುದ್ಧ ಕಟ್ಟು-ನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ, ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.
ಕ್ಯಾಂಪಿನಲ್ಲಿ ಶಾಂತಿ ಸಭೆ ಮಾಡಿ ಊರಿನ ಎಲ್ಲಾ ಜನಾಂಗದವರು ಶಾಂತಿ-ಸಹಬಾಳ್ವೆಯಿಂದ ಜೀವನ ಸಾಗಿಸಲು ಅನುವು ಮಾಡಿ ಕೊಡಬೇಕೆಂದು ಕೋರಿದೆ.
ಕ್ಯಾಂಪ್ ನಲ್ಲಿ ಮಾದಿಗ ಜನಾಂಗದವರೆಲ್ಲಾ ಸೇರಿ 15 ವರ್ಷಗಳ ಹಿಂದೆ ಭಾರತ ರತ್ನ ಡಾ|ಬಿ.ಆರ್. ಅಂಬೇಡ್ಕರ್ ನಾಮ ಫಲಕವನ್ನು ಸ್ಥಾಪಿಸಿ ಪೂಜಿಸುತ್ತಿದ್ದರು. ಇದನ್ನು ಸಹಿಸದ ಊರಿನ ಕೆಲ ಜನರು ಅದೇ ಸ್ಥಳದಲ್ಲಿ ಎನ್.ಟಿ.ಆರ್. ಅವರ ಪುತ್ಥಳ್ಳಿಯನ್ನು ನಿರ್ಮಿಸಿ ಅಲ್ಲಿಯೇ ಅನಾವರಣ ಮಾಡಬೇಕೆಂದು ಮಾದಿಗ ಜನಾಂಗದವರಿಗೆ ಅಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮ ಫಲಕವನ್ನು ತೆರವುಗೊಳಿಸುವಂತೆ ಹೇಳಿದ್ದರು.
ಅದಕ್ಕೆ ಒಪ್ಪಿಗೆ ಕೊಡದಿದ್ದ ಪರಿಣಾಮವಾಗಿ ಆದೇ ಊರಿನ ಕಮ್ಮ ಜನಾಂಗದ ಕುಮಾರ, ನಾಗೇಂದ್ರ,
ಜೈದಾರ ಬಾದ್ ಶೀನ, ರುದ್ರಯ್ಯ, ಕ್ರಾಂತಿ, ದುರುಗಪ್ಪ, ರಾಜು ಇವರುಗಳು ಮಾದಿಗ ಜನಾಂಗದವರ ಕುರಿತು ” ಲೇ ಮಾದಿಗೆ ಸೂಳೆ ಮಕ್ಕಳೇ, ನಾವೇ ಬೋರ್ಡ್ ಕಿತ್ತಾಕಿದ್ದು, ನಾವೇ ಚಪ್ಪಲಿಯಿಂದ ತುಳಿದಾಡಿದ್ದು,ನೀವು ಏನೂ ಮಾಡಿಕೊಳ್ಳಲಿಕ್ಕೆ ಆಗುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಎಫ್.ಐ.ಆರ್ ಸಹ ಆಗಿರುತ್ತದೆ. ವಿಪರ್ಯಾಸವೆಂದರೆ ಪೋಲಿಸ್ ಇಲಾಖೆಯು ಈವರಗೆ ಯಾರನ್ನು ಬಂಧಿಸಿಲ್ಲ ಹಾಗೂ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಂಡಿಲ್ಲ.ಆದಕಾರಣ ಈ ಕೋಡಲೇ ಅವರನ್ನು ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಬಳ್ಳಾರಿ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷರ ಹೆಚ್ ತಿಪ್ಪೇಸ್ವಾಮಿ,ಪ್ರಧಾನ ಕಾರ್ಯದರ್ಶಿ ಎಂ.ವಿ.ಎರುಕಲ ಸ್ವಾಮಿ,ಗೌರವಾಧ್ಯಕ್ಷರಾದ ಕೆ.ಗಿರಿ ಮಲ್ಲಪ್ಪ,ಎಲ್.ಮಾರಣ್ಣ, ಕಾರ್ಯಾಧ್ಯಕ್ಷ ಇ.ರಾಮಪ್ಪ,ಉಪಾಧ್ಯಕ್ಷರುಗಳಾದ ಕೆ.ವೀರಬಸಪ್ಪ,ಎಸ್ ಕಲ್ಲಪ್ರ, ಎನ್.ಡಿ.ವೆಂಕಮ್ಮ,ಎ.ನಾಗಪ್ಪ,ಸಹ ಕಾರ್ಯದರ್ಶಿ ಎಸ್.ಪ್ರಸಾದ್ ಸಂಘಟನ ಕಾರ್ಯದರ್ಶಿ ಹೆಚ್ ಮಲ್ಲೇಶ್ವರ, ಖಜಾಂಚಿಯಾದ ಹೆಚ್ ಗೋವಿಂದ ರಾಜುಲು,ಮಾಜಿ ಅಧ್ಯಕ್ಷರಾದ.ಎರೆಣ್ಣ ಹಾಗೂ ಬಿ.ಕೆ.ಅನಂತ ಕುಮಾರ್, ಹೆಚ್ ಹೊನ್ನುರಪ್ಪ,ಅಜೀವ ಸದಸ್ಯರೆಲ್ಲರೂ ಸೇರಿ ಮನವಿ ಸಲ್ಲಿಸಿದ್ದಾರೆ.






















