
ಬಳ್ಳಾರಿ.ಮೇ.14-ಕಲ್ಯಾಣ ಕರ್ನಾಟಕದಲ್ಲಿ ಸಂಗೀತ, ನೃತ್ಯ ಮತ್ತು ನಾಟಕಗಳಿಗೆ ಕೊಡುಗೆಯನ್ನು ನೀಡಿದವರು ಬಹಳಷ್ಟು ಮಹನೀಯರಿದ್ದಾರೆ. ಅವರ ಪರಂಪರೆಯೇ ಈ ವಿಶೇಷ ಪರೀಕ್ಷೆಗಳನ್ನು ಗುರುಕುಲ ಪದ್ಧತಿಯಲ್ಲಿ ನಡೆಸಿಕೊಂಡು ಹೋಗಲಾಗುತ್ತದೆ ಎಂದು ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಕೆ. ರಾಮಕೃಷ್ಣಯ್ಯ ಅಭಿಪ್ರಾಯ ಪಟ್ಟರು
ನಗರದ ಶ್ರೀಮೇಧಾ ಪದವಿ ಕಾಲೇಜಿನಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ 2025-26ನೇ ಸಾಲಿನ ವಿಶೇಷ ಸಂಗೀತ ನೃತ್ಯ ಹಾಗೂ ತಾಳವಾದ್ಯಗಳ ಪ್ರಾಯೋಗಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು
ನಂತರ ಪರೀಕ್ಷಾ ಕೇಂದ್ರವಾದ ಶ್ರೀಮೇಧಾ ಸಂಗೀತ ಮತ್ತು ಪ್ರದರ್ಶಕ ಕಲೆಗಳ ಕಾಲೇಜಿನ ಪ್ರಾಂಶುಪಾಲರಾದ .ರಾಮ್ಕಿರಣ್ ಕೆ ಇವರುಗಳು ಮಾತನಾಡುತ್ತ, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿಯೇ ಸಂಗೀತ, ನೃತ್ಯ ಮತ್ತು ನಾಟಕಗಳ ಪ್ರಾದೇಶಿ ಕಛೇರಿಯನ್ನು ಆರಂಭಿಸಿದರೆ ಸಾಂಸ್ಕೃತಿಕ ಪರಂಪರೆಗೆ ಅನುಕೂಲವಾಗುತ್ತದೆ ಎಂದು ಉಪಕುಲಪತಿಗಳ ಬಳಿ ಮನವಿ ಮಾಡಿದರು ತದನಂತರ ಉಪಕುಲಪತಿಗಳನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಧದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಜಿನಾನ್ ಬಾಷ ನೃತ್ಯ ಶಿಕ್ಷಕರು, ಮಲ್ಲಿಕಾರ್ಜುನ ತೂರ್ನುರು, ಸಂಗೀತ ಶಿಕ್ಷರು, ಅಂಜಲಿ ನೃತ್ಯ ಶಿಕ್ಷಕರು, ಅಲ್ತಾಫ್ ನೃತ್ಯ ಶಿಕ್ಷಕರು, ಮಾಸ್ಟರ್ ಅಭಿಷೇಕ್ ಸಂಗೀತ ಶಿಕ್ಷರು, ಶ್ರೀಮತಿ ರಾಜೇಶ್ವರಿ ಸಂಗೀತ ಶಿಕ್ಷರು, ರೇಣುಕಾ ಸಂಗೀತ ಶಿಕ್ಷರು, ದೊಡ್ಡಯ್ಯ ಗವಾಯಿಗಳು ಸಂಗೀತ ಶಿಕ್ಷರು ಹಾಗೂ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ವಿ.ವಿ.ಸಂಯೋಜಕರು ಉಪಸ್ಥಿತರಿದ್ದರು
.ನಗರದ ಶ್ರೀಮೇಧಾ ಪದವಿ ಕಾಲೇಜಿನಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ 2025-26ನೇ ಸಾಲಿನ ವಿಶೇಷ ಸಂಗೀತ ನೃತ್ಯ ಹಾಗೂ ತಾಳವಾದ್ಯಗಳ ಪರೀಕ್ಷೆಗಳು ನಡೆದವು. ದಿನಾಂಕ 10.05.2026 ರಂದು ಲಿಖಿತ ಪರೀಕ್ಷೆಗಳು ಹಾಗೂ 12 ಮತ್ತು 13.05.2026 ರಂದು ಪ್ರಾಯೋಗಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಇದರಲ್ಲಿ ಒಟ್ಟು 266 ಅಭ್ಯರ್ಥಿಗಳು ಭಾಗವಹಿಸಿದ್ದರು, ಎಲ್ಲಾ ಪರೀಕ್ಷಾರ್ಥಿಗಳು ಬಣ್ಣ ಬಣ್ಣದ ಭರತನಾಟ್ಯ ಉಡುಪಿನಲ್ಲಿ ಎಲ್ಲರ ಗಮನ ಸೆಳೆದರು. ಸಂಗೀತದ ಗಾಯನಗಳ ಮೂಲಕ ಪರಂಪರೆಗೆ ನಾಂದಿ ಹಾಡಿದರು.























