Home ಜಿಲ್ಲೆ ಉಜ್ಜಿನಿ ಸದ್ಧರ್ಮ ಪೀಠಕ್ಕೆ ಸಚಿವ ವಿಜಯಾನಂದ ಕಾಶಪ್ಪನವರ್ ಭೇಟಿ

ಉಜ್ಜಿನಿ ಸದ್ಧರ್ಮ ಪೀಠಕ್ಕೆ ಸಚಿವ ವಿಜಯಾನಂದ ಕಾಶಪ್ಪನವರ್ ಭೇಟಿ

ಸಂಜೆವಾಣಿ ವಾರ್ತೆ:

ಕೊಟ್ಟೂರು: ಸೆಪ್ಟೆಂಬರ್ 15- ಉಜ್ಜಿನಿ ಸದ್ಧರ್ಮ ಪೀಠದಲ್ಲಿ ನಡೆದ 1008 ಜಗದ್ಗುರು ಸಿದ್ದಲಿಂಗ ಶಿವಾಚಾರ್ಯರ ಪುರಾಣ ಮಹಾ ಮಂಗಲ ಹಾಗೂ ಗೋಶಾಲೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉಧ್ಯಮಗಳು ಹಾಗೂ ಬಾಗಲಕೋಟೆ ಉಸ್ತುವಾರಿ ಸಚಿವರಾದ ವಿಜಯಾನಂದ ಕಾಶಪ್ಪನವರ್ ಭೇಟಿ ನೀಡಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು,ಹಾಗೂ ಪೀಠದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿರುವ ಗೋಶಾಲೆಯನ್ನು ಉದ್ಘಾಟಿಸಿ, ಗೋ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.ಪೀಠಕ್ಕೆ ಆಗಮಿಸಿದ ಸಚಿವರನ್ನು ಪೀಠದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ಪೀಠದ ಆವರಣದಲ್ಲಿರುವ ವಿವಿಧ ಧಾರ್ಮಿಕ ಕೇಂದ್ರಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಸಚಿವರು, ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಪೀಠದ ವತಿಯಿಂದ ನಡೆಯುತ್ತಿರುವ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ ಗೋವುಗಳ ಸಂರಕ್ಷಣೆ ಹಾಗೂ ಪಾಲನೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಹೊಂದಿದ್ದು, ಇಂತಹ ಗೋಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು ಪೀಠವು ಕೇವಲ ಪೂಜಾ ಕೇಂದ್ರಗಳಾಗಿರದೆ ಸಮಾಜಮುಖಿ ಚಟುವಟಿಕೆಗಳ ಕೇಂದ್ರಗಳಾಗಿದ್ದು ಶಿಕ್ಷಣ, ಆರೋಗ್ಯ,ಗೋಸಂರಕ್ಷಣೆ ಹಾಗೂ ಜನಸೇವೆಯಂತಹ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು.ಪೀಠದ ವತಿಯಿಂದ ನಡೆಯುತ್ತಿರುವ ವಿವಿಧ ಜನಪರ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಪೀಠದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸದ್ಧರ್ಮ ಸಿಂಹಾಸನ ಪೀಠದ 1008 ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು ಕಾರ್ಯಕ್ರಮದಲ್ಲಿ ಶ್ರೀ ರೇಣುಕಾ ಶಿವಾಚಾರ್ಯರು ಎಡೆಯೂರು, ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಮರಿಯಮ್ಮನಹಳ್ಳಿ, ಶ್ರೀ ವರಸದ್ಯೋಜಾತ ಶಿವಾಚಾರ್ಯರು ಹರಪನಹಳ್ಳಿ ತೆಗ್ಗಿನಮಠ, ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯರು ಕೂಡ್ಲಿಗಿ, ಹಿರೇಮಠ ಶ್ರೀ ಸಿದ್ದಲಿಂಗ ಶಿವಾಚಾರ್ಯರು ತಾವರೆಕೆರೆ, ಶ್ರೀ ಮಹೇಶ್ವರ ಸ್ವಾಮಿಗಳು ನಂದಿಪುರ, ಶ್ರೀ ಹಾಲಶಂಕರ ಸ್ವಾಮಿಗಳು ಹಗರಿಬೊಮ್ಮನಹಳ್ಳಿ ,ಶಾಸಕರಾದ ಎನ್ ಟಿ ಶ್ರೀನಿವಾಸ್,ಶ್ರೀಮತಿ ವೀಣಾ ಕಾಶಪ್ಪನವರ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗುಂಡುಮುಣುಗು ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ದಾರುಕೇಶ್,ಅಡಿಕೆ ಮಂಜುನಾಥ, ವಕೀಲರಾದ ಮರುಳಸಿದ್ದಪ್ಪ ಮುಖಂಡರಾದ ಮಠದ ಮಲ್ಲಿಕಾರ್ಜುನ ಸೇರಿದಂತೆ ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.