
ವಾಷಿಂಗ್ಟನ್,ಏ.14:- ಹಾರ್ಮುಜ್ ಜಲಸಂಧಿಯ ಮೂಲಕ ಕಚ್ಚಾತೈಲ ಸಾಗಣೆಗೆ ಅಡ್ಡಿಪಡಿಸುವ ಮೂಲಕ ಇರಾನ್ “ಆರ್ಥಿಕ ಭಯೋತ್ಪಾದನೆ” ನಡೆಸುತ್ತಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗಂಭೀರ ಆರೋಪ ಮಾಡಿದ್ದಾರೆ.
ಇರಾನ್ ನಡೆಸುತ್ತಿರುವ ಈ ರೀತಿಯ ಆರ್ಥಿಕ ಭಯೋತ್ಪಾದನೆಗೆ ಅಮೆರಿಕ ತಕ್ಕ ಉತ್ತರ ನೀಡದೆ ಸುಮ್ಮನೆ ಇರುವುದಿಲ್ಲ. “ಇರಾನ್ ಆರ್ಥಿಕ ಭಯೋತ್ಪಾದನೆಯಲ್ಲಿ ತೊಡಗಿದರೆ, ಹಾರ್ಮುಜ್ ಜಲಸಂಧಿಯಿಂದ ಇರಾನಿನ ಹಡಗುಗಳು ಹೊರಬರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ,
ಸುದ್ದಿಗಾರೊಂದಿಗೆ ಮಾತನಾಡಿದ ಅವರು ಹೋರ್ಮುಜ್ ಜಲಸಂಧಿಯನ್ನು ಮುಚ್ಚಿ ಇರಾನ್ ಆಟ ಆಡುತ್ತಿದೆ. ಅಮೆರಿಕಕ್ಕೂ ಆಟವಾಡಲು ಬರುತ್ತದೆ ಎನ್ನುವುದನ್ನು ಇರಾನ್ ಮರೆತಂತಿದೆ. ಕಚ್ಚಾ ತೈಲ ತುಂಬಿರುವ ಹಡುಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು ಮತ್ತು ಹಡುಗಳಿಗೆ ಸುಂಕ ವಿಧಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ
ಹೋರ್ಮುಜ್ ಜಲಸಂಧಿ ಮತ್ತು ಪಶ್ವಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾದರೆ ಇರಾನ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ
ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ಮುರಿದು ಬಿದ್ದ ಕುರಿತು ಪ್ರತಿಕ್ರಿಯಿಸಿದ ಅವರು ಇರಾನ್ಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ನಾವು ಹಲವು ಅವಕಾಶ ಮಾಡಿಕೊಟ್ಟಿದ್ದೆವು, ಆದರೆ ಆವುಗಳನ್ನು ಯಾವುದನ್ನು ಪಾಲಿಸದೆ ತಮ್ಮ ಹಠಕ್ಕೆ ಜೋತು ಬಿದ್ದಿದ್ದಾರೆ ಇದರಿಂದ ಪಶ್ಚಿಮ ಏಷ್ಯಾದಲ್ಲಿ ಬಿಗುವಿನ ವಾತಾರಣ ನಿರ್ಮಾಣಕ್ಕೆ ಇರಾನ್ ನೇರ ಕಾರಣ ಎಂದಿದ್ದಾರೆ
ಕದನ ವಿರಾಮ ಮುಂದುವರಿಸುವ ಚೆಂಡು ಈಗ ಇರಾನ್ ಅಂಗಳದಲ್ಲಿಯೇ ಇದೆ. ಇರಾನ್ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ತಕ್ಕ ರೀತಿ ಅಮೇರಿಕಾವೂ ಉತ್ತರಿಸಲಿದೆ. ಕೆಂಪು ಗೆರೆ ದಾಟಿದರೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ
ಇರಾನ್ ತನ್ನ ಪುಷ್ಟೀಕರಿಸಿದ ಯುರೇನಿಯಂ ಮೇಲೆ ಅಮೆರಿಕದ ನಿಯಂತ್ರಣ ಮತ್ತು ಪರಮಾಣು ಶಸ್ತ್ರಾಸ್ತ್ರ ನಿರ್ಮಿಸದಂತೆ ಖಚಿತಪಡಿಸಿಕೊಳ್ಳಲು ಪರಿಶೀಲನಾ ವ್ಯವಸ್ಥೆ ಸೇರಿದಂತೆ ಅಮೆರಿಕದ ಪ್ರಮುಖ ಷರತ್ತುಗಳಿಗೆ ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

























