
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,2- ನಗರದ ಅಂಜಿನಪ್ಪ ನಗರದ ಪಾಲಿಕೆಯ ಡಂಪ್ ಯಾರ್ಡ್ ಬಳಿಯ ಗ ಸರ್ವೆ ನಂಬರ್ 813 ವಿಸ್ತೀರ್ಣ 1.13 ಎಕರೆ ಹಾಗು ಶಾಂತಿ ನಗರದ ಬಳಿಯ ಸರ್ವೇ ನಂಬರ್ 977 ರ 9:20 ಎಕರೆ, ಸರ್ವೆ ನಂಬರ್ 976 ರ 4:72 ಎಕರೆ ಸೇರಿದಂತೆ ಒಟ್ಟು 15:05 ಎಕರೆ ಸರ್ಕಾರ ಜಮೀನಲ್ಲಿನ ಒತ್ತುವರಿಯನ್ನು ತೆರವು ಮಾಡಿ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದುಕೊಂಡಿದೆ.
ಪಾಲಿಕೆಯ ಡಂಪ್ ಯಾರ್ಡ್ ಬಳಿಯ ಜಮೀನಿನಲ್ಲಿ ಒಂದು ಗುಡಿಸಲು ಹಾಕಿಕೊಂಡು ಚರ್ಚ್ ಮಾಡಲಾಗಿದೆ. ಇದನ್ನು ತೆರವು ಮಾಡುವಂತೆ ಸೂಚನೆ ನೀಡಿದೆ. ಅಲ್ಲದೆ ಇನ್ನುಳಿದ ನಿವೇಶನಕ್ಕೆ ಪ್ರಭಾವಿ ಮುಖಂಡರೊಬ್ಬರು ಫೆನ್ಸಿಂಗ್ ಹಾಕಿದ್ದರು. ಅದನ್ನು ತೆರವು ಮಾಡಿ ಸರ್ಕಾರಿ ಜಮೀನು ಎಂದು ಫಲಕವನ್ನು ಹಾಕಲಾಯ್ತು.
ಎಡಿಸಿ ಮಹಮ್ಮದ್ ಝುಬೇರ್, ಭೂ ದಾಖಲೆಗಳ ಅಧಿಕಾರಿ ಬಳ್ಳಾರಪ್ಪ, ಪಾಲಿಕೆ, ಪೊಲೀಸ್, ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.






















