
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.05: ಬಳ್ಳಾರಿಯ ರಾವ್ ಬಹದ್ದೂರ್ ವೈ ಮಹಬಲೇಶ್ವರಪ್ಪ ತಾಂತಿಕ ಮಹಾವಿದ್ಯಾಲಯದಲ್ಲಿ (ಲರ್ನಿಂಗ್ ಲಿಂಕ್ಸ್ ಫೌಂಡೇಶನ್,ನ್ಯೂ ಡೆಲ್ಲಿ,) (ಐಬಿಎಂ ಸ್ಕಿಲ್ಸ್ ಬಿಲ್ಡ್) ಇವರುಗಳ ಬೆಂಬಲದೊಂದಿಗೆ ನಾಳೆ ಉದ್ಯೋಗ ಮೇಳವನ್ನು ಹಮ್ಮಿಕೊಂಡಿರುತ್ತಾರೆ.
ಈ ಉದ್ಯೋಗ ಮೇಳದಲ್ಲಿ ಸುಮಾರು 10+ ಕಂಪನಿಗಳು ಭಾಗವಹಿಸಲಿದ್ದು, 700+ ಉದ್ಯೋಗ ನೀಡಲು ಸಂದರ್ಶನವನ್ನು ನಡೆಸಲು ಉದ್ದೇಶಿಸಿದ್ದು, ಸದರಿ ಸುವರ್ಣಾವಕಾಶವನ್ನು ಉಪಯೋಗಿಸಿಕೊಳ್ಳಲು ಕೋರಲಾಗಿದೆ, ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ಎಲ್ಲಾ ಪದವಿ ಕಾಲೇಜುಗಳ 2024 ಮತ್ತು 2025 ನೇ ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಪ್ರಸುತ್ತ 2026 ನೇ ಸಾಲಿನ ಆಸಕ್ತ ವಿದ್ಯಾರ್ಥಿಗಳನ್ನು ನಾಳೆ ನಡೆಯುವ ಉದ್ಯೋಗ ಸಂದರ್ಶನ ಮೇಳದಲ್ಲಿ ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಕಾಲೇಜ್ ನ ಕಛೇರಿಯನ್ನು ಸಂಪರ್ಕಿಸಲು ಮನವಿ.






















