Home ಜಿಲ್ಲೆ ಆರೋಗ್ಯಕರ ಬದುಕಿಗೆ ಸುಪೋಷಣವೇ ಬುನಾದಿ:ಮರಿಸ್ವಾಮಿ

ಆರೋಗ್ಯಕರ ಬದುಕಿಗೆ ಸುಪೋಷಣವೇ ಬುನಾದಿ:ಮರಿಸ್ವಾಮಿ

ಸಂಜೆವಾಣಿ ವಾರ್ತೆ

ಕೊಟ್ಟೂರು: ಸೆಪ್ಟೆಂಬರ್ 15- ಕೊಟ್ಟೂರು ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿರುವ ಅಂಬೇಡ್ಕರ್ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾವತಿಯಿಂದ, ಅಂಗನವಾಡಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿ. ರೇಣುಕಮ್ಮ ಇವರ ಮುಖಾಂತರ ಆಯೋಜಿಸಲಾಗಿದ್ದ ಒಂಬತ್ತನೇ ರಾಷ್ಟ್ರೀಯ ಸುಪೋಷಣಾ ಕಾರ್ಯಕ್ರಮದ ನಿಮಿತ್ಯವಾಗಿ ಕಾಲೋನಿಯ ಇಬ್ಬರು ಹೆಣ್ಣುಮಕ್ಕಳ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪೌಷ್ಟಿಕವಾದ ಆಹಾರದ ಧಾನ್ಯಗಳ ಮತ್ತು ತರಕಾರಿಗಳ ಸಹಾಯದಿಂದ ಇಲಾಖೆಗೆ ಸಂಬಂಧಪಟ್ಟ ಒಂದು ಸುಂದರ ಚಿತ್ರವನ್ನು ಹಾಕಿ ಮತ್ತು ವಿದಿ ವಿಧಾನದ ಪೂಜೆಯನ್ನು ಸಲ್ಲಿಸಿ ಆ ಇಬ್ಬರು ಹೆಣ್ಣು ಮಕ್ಕಳಿಗೆ ವಿದಿ ವಿಧಾನಗಳಿಂದ ಅಲ್ಲಿ ಸೇರಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶಿಶು ಅಭಿವೃದ್ಧಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕರಾದ ಅನ್ನಪೂರ್ಣ ಅವರು, ಮಹಿಳಾ ಮತ್ತು ಮಕ್ಕಳ ಆಯೋಗದ ಬಿ.ಬಸಮ್ಮ,ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾದ ಬಿ.ರೇಣುಕಮ್ಮ ಇನ್ನಿತರ ಮುತ್ತೈದೆಯರು ಸೇರಿ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ಅನ್ನಪೂರ್ಣ ಅವರು ಸೀಮಂತ ಕಾರ್ಯಕ್ಕೆ ಬಂದ ಆ ಇಬ್ಬರು ಹೆಣ್ಣು ಮಕ್ಕಳಿಗೆ ಅವರ ಆರೋಗ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿದರು, ಅವುಗಳಲ್ಲಿ ಪ್ರತೀನಿತ್ಯ ಪೌಷ್ಟಿಕ ಆಹಾರಗಳನ್ನೇ ಸೇವಿಸಬೇಕು,ಚೆನ್ನಾಗಿ ನೀರು ಕುಡಿಯಬೇಕು,ಹಾಗೆಯೇ ಕೆಲವು ವ್ಯಾಯಾಮಗಳನ್ನು ಮಾಡುವುದರ ಮುಖಾಂತರ ನಿಮ್ಮ ಮತ್ತು ನಿಮ್ಮ ಹೊಟ್ಟೆಯೊಳಗೆ ಬೆಳೆಯುವ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.ಈ ಸಮಯದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ಬದ್ದಿ ಮರಿಸ್ವಾಮಿಯವರು ಮಾತನಾಡಿ ಆರೋಗ್ಯಕರ ಬದುಕಿಗೆ ಸುಪೋಷಣವು ಬುನಾದಿಯಾಗಿದ್ದು ಹಿಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ಗರ್ಭಿಣಿಯಾದರೆ ತುಂಬಾ ಬಡತನದಲ್ಲಿದ್ದವರು ಅವರಿಗೆ ಪೌಷ್ಟಿಕವಾದ ಆಹಾರ ಸಿಗುತ್ತಿರಲಿಲ್ಲ,ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿರಲಿಲ್ಲ ಹಾಗಾಗಿ ಗರ್ಭಿಣಿಯರು ಮತ್ತು ಪೋಷಕರು ತುಂಬಾ ನೋವುಗಳನ್ನು ಅನುಭವಿಸುತ್ತಿದ್ಧರು.ಆದರೆ ಇತ್ತೀಚಿನ ದಿನಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಅವರವರ ತಾಯಂದಿರು ತಮ್ಮ ಮಕ್ಕಳ ಬಗ್ಗೆ ಕಾಳಜಿ

ವಹಿಸುತ್ತಿರುವುದರ ಜೊತೆಗೆ ಈಗ ಅಂಗನವಾಡಿ ಕಾರ್ಯಕರ್ತೆಯರೂ ಕೂಡಾ ಗರ್ಭಿಣಿಯರಿಗೆ ಮೊದಲನೆಯ ತಾಯಿಯಂತೆ ಆರೋಗ್ಯ ಇಲಾಖೆಯ ಸಹಾಯದಿಂದಾಗಿ ಪೌಷ್ಟಿಕ ಆಹಾರವನ್ನೇ ಊಟ ಮಾಡಬೇಕು,ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದು ಅತಿಯಾದ ಜವಾಬ್ದಾರಿಗಳಿಂದ ಗರ್ಭಿಣಿ ಸ್ತ್ರೀಯರನ್ನು ನೋಡಿಕೊಳ್ಳುತ್ತಾರೆ.ಅಲ್ಲದೆ ಒಂದೇ ಸೂರಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕೊಡುವವರು ಇವರೇ, ಯಾಕೆಂದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಆಯಾ ಭಾಗದ ಗರ್ಭಿಣಿಯರಿಗೆ ಸಿಗಬೇಕಾದ ಎಲ್ಲಾ ಅನುಕೂಲತೆಗಳನ್ನು ಕಲ್ಪಿಸಿ ಕೊಟ್ಟಿರುವುದಲ್ಲದೆ ಉತ್ತಮ ಗುಣಮಟ್ಟದ ಶಿಕ್ಷಣವೂ ಸಿಗುವುದು ಜೊತೆಗೆ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಗಳನ್ನು ಮಾಡುವುದನ್ನು ಗಮನಿಸಿದರೆ ಹೆಮ್ಮೆಯ ಸಂಗತಿಯೇ ಸರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿ. ರೇಣುಕಮ್ಮ,ಬಿ.ಹೆಚ್.ಸುಶೀಲ, ಮಹಾದೇವಿ,ಯು.ನಿಂಗಮ್ಮ,ಅನ್ನಪೂರ್ಣ,ಗೀತಾ,ಡಿ ಶೋಭಾ,ಸಿ.ಜ್ಯೋತಿ,ಎ.ಕೆ.ಸಾವಿತ್ರಮ್ಮ,ಎ.ಎಂ.ಜ್ಯೋತಿ, ಹೆಚ್ ತಿಪ್ಪಮ್ಮ ಕಾಲೋನಿಯ ಹೆಣ್ಣುಮಕ್ಕಳು ಹಿರಿಯರು ಉಪಸ್ಥಿತರಿದ್ದರು.