Home ಜಿಲ್ಲೆ ಮೈಸೂರು ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ಹೊರಟ ನೂರಾರು ಅನುಯಾಯಿಗಳು

ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ಹೊರಟ ನೂರಾರು ಅನುಯಾಯಿಗಳು

ಸಂಜೆವಾಣಿ ವಾರ್ತೆ
ಮಳವಳ್ಳಿ: ಅ.28-
ಚಾಮರಾಜನಗರದಲ್ಲಿ ನಡೆಯುವ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕೆ ಮಳವಳ್ಳಿ ತಾಲೂಕಿನ ನೌಕರ ಬಂಧುಗಳು ಅಪಾರ ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಗಳು ಭಾನುವಾರ ಬೆಳಿಗ್ಗೆ ಬಸ್ಸುಗಳಲ್ಲಿ ಪ್ರಯಾಣ ಬೆಳೆಸಿದರು ಮಳವಳ್ಳಿ ತಾಲೂಕಿನ ಅತ್ಯಂತ ಸುಮಾರು 20ಕ್ಕೂ ಹೆಚ್ಚು ಬಸ್ಸುಗಳು ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದಲ್ಲಿನ ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಗಳನ್ನು ಕರೆದುಕೊಂಡು ಹೊರಟವು ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ನೂರಾರು ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಗಳು ಬುದ್ಧ ಘೋಷಣೆಗಳೊಂದಿಗೆ


ಚಾಮರಾಜನಗರದತ್ತ ಹೊರಟರು ಪ್ರಸ್ತುತ ದಿನಗಳಲ್ಲಿ ಪ್ರಪಂಚದಾದ್ಯಂತ ಅಶಾಂತಿ ನೆಲೆಸಿದ್ದು ಮನುಷ್ಯರು ಕ್ರೌರ್ಯ ಹಿಂಸೆಯಿಂದ ಬದುಕುತ್ತಿದ್ದಾರೆ ದೇಶ ದೇಶಗಳ ನಡುವೆ ಯುದ್ಧ ಸಾರುತ್ತಿದ್ದು ಅಶಾಂತಿ ನೆಲೆಸಿದೆ ಅದಕ್ಕಾಗಿ ಈ ಪ್ರಪಂಚಕ್ಕೆ ಬುದ್ಧನ ಸಂದೇಶಗಳು ಅಮೂಲ್ಯ ಮಾರ್ಗವನ್ನು ತೋರಿಸುತ್ತಾ ಶಾಂತಿ ಸ್ಥಾಪನೆಗೆ ಕಾರಣವಾಗಿವೆ ಇಂತಹ ಬೌದ್ಧ ಸಮ್ಮೇಳನಗಳು ಪ್ರತಿ ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲೂ ಸಹ ನಡೆದು ಬುದ್ಧರ ಸಂದೇಶಗಳನ್ನು ಪಂಚಶೀಲ ತತ್ವಗಳನ್ನು ಜನರಲ್ಲಿ ಮೂಡಿಸಬೇಕೆಂದು
ಬುದ್ಧ ಅನುಯಾಯಿ ಶಿವಕುಮಾರ್ ಆರೋಗ್ಯ ಇಲಾಖೆ ಇವರು ಸಂದೇಶ ಸಾರಿದರು ಬುದ್ಧ ಪಯಣದಲ್ಲಿ ಎಸ್ಸಿ ಎಸ್ಟಿ ನೌಕರರ ಸಂಘದ ಅಧ್ಯಕ್ಷರಾದ ಬೋರಯ್ಯ ಮಲ್ಲಿಕಾರ್ಜುನ ಸ್ವಾಮಿ ಪ್ರಾಂಶುಪಾಲರು ಆದರ್ಶ ವಿದ್ಯಾಲಯ ಮಳವಳ್ಳಿ ರಾಚಯ್ಯ ಶೆಟ್ಟಹಳ್ಳಿ ವಕೀಲರು ಚುಂಚಣ್ಣ ಕೃಷ್ಣಮೂರ್ತಿ ಶಿಕ್ಷಕರು ಪುಟ್ಟಸ್ವಾಮಿ ಸೀಕ್ರೆಶ್ ಮಲ್ಲಿಕಾರ್ಜುನ ಸ್ವಾಮಿ ಕೆಬಿ ಶಾಂತರಾಜು ಮಹಾಲಿಂಗಯ್ಯ ಮರಿಸ್ವಾಮಿ ಜಿ ಶಿಕ್ಷಕರು ನಾಗರಾಜು ಕೃಷ್ಣ ಶೆಟ್ಟಳ್ಳಿ ಸಿ ರಾಚಯ್ಯ ಸುಧಾಕರ್ ಸಂದೇಶ್ ಮಹದೇವು ಇನ್ನೂ ಹಲವಾರು ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಗಳು ಬೌದ್ಧ ಸಮ್ಮೇಳನಕ್ಕೆ ಪ್ರಯಾಣ ಬೆಳೆಸಿದರು