Home ಜಿಲ್ಲೆ ಹಿರಿಯ ನ್ಯಾಯವಾದಿ ಶಿವಾ ಚಂದ್ರಶೇಖರ ನಿಧನ

ಹಿರಿಯ ನ್ಯಾಯವಾದಿ ಶಿವಾ ಚಂದ್ರಶೇಖರ ನಿಧನ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ. 07: ಇಲ್ಲಿನ ಬಳ್ಳಾರಿ ವಕೀಲರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಹಿರಿಯ ನ್ಯಾಯವಾದಿ ಶಿವಾ ಚಂದ್ರಶೇಖರ (87) ಇವರು ಇಂದು ಶನಿವಾರ ನಸುಕಿನಲ್ಲಿ ಲಿಂಗೈಕ್ಯರಾಗಿದ್ದು, ಇವರ ಅಂತ್ಯಕ್ರಿಯೆ ನಗರದ ವೀರಶೈವ ರುದ್ರಭೂಮಿಯಲ್ಲಿ ಇಂದು ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.

ಮೃತರು ಇಬ್ವರು ಪುತ್ರರು, ಒಬ್ಬ ಪುತ್ರಿ, ಸೊಸೆಯಂದಿರರು , ಮೊಮ್ಮಕ್ಕಳು, ಅಪಾರ ಸಂಖ್ಯೆಯ ಬಂಧು ಮಿತ್ರರು ಹಾಗೂ ಆಪ್ತರನ್ನು ಅಗಲಿದ್ದಾರೆ.

ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರು, ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ನಿರ್ದೇಶಕರಾಗಿ ಸಮಾಜ ಸೇವೆಯಲ್ಲಿ ಇವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.