
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.01: ಸ್ಥಳೀಯ ಗಾಂಧಿನಗರ ಬಾಲಭಾರತೀ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತಿ, ಕರಾಟೆ ಮಕ್ಕಳಿಗೆ ಬೆಲ್ಟ್ ವಿತರಣಾಕಾರ್ಯಕ್ರಮವನ್ನುಏರ್ಪಡಿಸಲಾಗಿತ್ತು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಬಿ.ಕೆ.ಬಿ.ಎನ್.ಮೂರ್ತಿರವರು ವಹಿಸಿದರು. ಇವರು ಮಾತನಾಡಿ ಸ್ವಾಮಿ ವಿವೇಕಾನಂದರುಜಗತ್ತುಕಂಡಅದ್ಬುತ ವೀರ ಸನ್ಯಾಸಿ ಅಂತಹ ಮಹನ್ ವ್ಯಕ್ತಿಯನ್ನು ನೆನಸುವುದೆ ಪುಣ್ಯದ ಕೆಲಸ ಮತ್ತುಕರಾಟೆಯಿಂದದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಾಗುತ್ತದೆ.ಪ್ರತಿಯೊಬ್ಬ ಮಕ್ಕಳು ಶ್ರದ್ಧೆಯಿಂದಕರಾಟೆಯನ್ನುಕಲಿಯಬೇಕುಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಆಂಧ್ರ ಪ್ರದೇಶ, ರಾಜ್ಯಾಧ್ಯಕ್ಷರು ದಂಡಿನ ಶಿವಾನಂದ ಅವರು ಶ್ರೀ ಸ್ವಾಮಿ ವಿವೇಕಾಂದರ ಭಾವಚಿತ್ರಕ್ಕೆ ಪುಷ್ಪರ್ಪಣೆಯನ್ನು ಮಾಡುವುದರ ಮೂಲಕ ಮಾತನಾಡಿ, ಸ್ವಾಮಿ ವಿವೇಕಾನಂದರತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಬೇಕು ಎಂದು ತಿಳಿಸಿದರು.ಪ್ರತಿಯೊಬ್ಬ ಪೋಷಕರುತಮ್ಮ ಮಕ್ಕಳಿಗೆ ಕರಾಟೆ, ಯೋಗ, ಧ್ಯಾನ, ಕಲಿಸಬೇಕೆಂದುಕರೆ ನೀಡಿದರು.
ಕಾರ್ಯಕ್ರಮದಲ್ಲಿಕುಮಾರಿ ಮನೋಜ್ಞಾ ಪ್ರಾರ್ಥನೆಗೀತೆ ಹಾಡಿದಳು.ಕರಾಟೆ ಮಕ್ಕಳಿಂದ ಕರಾಟೆ ಪ್ರದರ್ಶನ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೋರಿ ವಿರುಪಾಕ್ಷಪ್ಪನವರು, ಕಟ್ಟೆಗೌಡರು, ಮುರಳಿಯವರು, ಸುರೇಶ, ಕಾರ್ಯನಿರ್ವಹಕಅಭಿಯಂತರರು, ಗಂಗಾವತಿ ವಿರೇಶ್, ಪ್ರಧಾನ ಕಾರ್ಯದರ್ಶಿಗಳು, ಅ.ಭಾ.ವೀ.ಮ.ಸಭಾ, ಬಳ್ಳಾರಿ, ಆನಂದಗಾಜುಲು ಮುಂತಾದವರು ಭಾಗವಹಿಸಿದರು.
ಪ್ರಾಸ್ತವಿಕವಾಗಿಟ್ರಸ್ಟ್‍ನಅಧ್ಯಕ್ಷರಾದ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ ಮಾತನಾಡಿದರು, ಕಾರ್ಯಕ್ರಮದ ವಂದನಾರ್ಪಣೆಯನ್ನು ವಾಸುದೇವರಾಜುಲು ಇವರು ನಿರ್ವಹಿಸಿದರು.






















