Home ಸಿನೆಮಾ ಸಮರ್ಜಿತ್ ಲಂಕೇಶ್‌ಗೆ ಫಿಲ್ಮ್‌ಫೇರ್ ಪ್ರಶಸ್ತಿ

ಸಮರ್ಜಿತ್ ಲಂಕೇಶ್‌ಗೆ ಫಿಲ್ಮ್‌ಫೇರ್ ಪ್ರಶಸ್ತಿ


‘ಗೌರಿ’ ಚಿತ್ರದ ಅಭಿನಯಕ್ಕಾಗಿ ಯುವ ನಟ ಸಮರ್ಜಿತ್ ಲಂಕೇಶ್ ಅವರಿಗೆ ಅತ್ಯುತ್ತಮ ನವನಟ ವಿಭಾಗದಲ್ಲಿ ಫಿಲ್ಮ್‌ಫೇರ್ (ದಕ್ಷಿಣ) ಪ್ರಶಸ್ತಿ ಲಭಿಸಿದೆ. ಕೇರಳದ ಕೊಚ್ಚಿಯಲ್ಲಿ ನಡೆದ 2024ನೇ ಸಾಲಿನ 70ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಅವರಿಗೆ ಈ ಗೌರವ ದೊರಕಿದೆ. ಇದರೊಂದಿಗೆ ಲಂಕೇಶ್ ಕುಟುಂಬಕ್ಕೆ ಫಿಲ್ಮ್‌ಫೇರ್ ವೇದಿಕೆಯಲ್ಲಿ ಮೂರನೇ ಪ್ರಶಸ್ತಿ ಸಿಕ್ಕಂತಾಗಿದೆ.ಈ ಹಿಂದೆ ಸಮರ್ಜಿತ್ ಅವರ ತಾತ, ಖ್ಯಾತ ಸಾಹಿತಿ ಮತ್ತು ನಿರ್ದೇಶಕ ಪಿ. ಲಂಕೇಶ್ ಅವರು ‘ಎಲ್ಲಿಂದಲೋ ಬಂದವರು’ ಚಿತ್ರದ ನಿರ್ದೇಶನಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದರು. ನಂತರ ಅವರ ಪುತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ‘ಐಶ್ವರ್ಯ’ ಚಿತ್ರದ ಮೂಲಕ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಈಗ ಮೂರನೇ ತಲೆಮಾರಿನ ಪ್ರತಿಭೆಯಾದ ಸಮರ್ಜಿತ್, ತಮ್ಮ ಚೊಚ್ಚಲ ಚಿತ್ರ ‘ಗೌರಿ’ಯಲ್ಲಿನ ಅಭಿನಯದಿಂದಲೇ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದು ಗಮನಸೆಳೆದಿದ್ದಾರೆ.‘ಗೌರಿ’ ಬಳಿಕ ಅವರು ಪ್ಯಾನ್ ಇಂಡಿಯಾ ‘ವೃಷಭ’ ಚಿತ್ರದಲ್ಲಿ ದಿಗ್ಗಜ ನಟ ಮೋಹನ್ ಲಾಲ್ ಜೊತೆ ಅಭಿನಯಿಸಿದ್ದು, ಮುಂದಿನ ದಿನಗಳಲ್ಲಿ ಒಂದು ಕನ್ನಡ ಹಾಗೂ ಒಂದು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.