Home ಪಾಕವಿಧಾನ ಶಾಹಿ ಮಟನ್ ಕುರ್ಮಾ

ಶಾಹಿ ಮಟನ್ ಕುರ್ಮಾ

ಬೇಕಾಗುವ ಸಾಮಗ್ರಿಗಳು

*ಮಟನ್ 1\2 .
*ಈರುಳ್ಳಿ – 1\2 ದೊಡ್ಡದು
*ಗೋಡಂಬಿ 10
*ಬಾದಾಮಿ 5
*ಚಕ್ಕೆ 2 ಪೀಸಸ್
*ಲವಂಗ 2-3
*ಅನಾನಸ್ ಹೂ -1
*ಜಾಕಾಯಿ ಪುಡಿ 1\4 ಟೀ ಸ್ಪೂನ್
*ಮೊಸರು 1\2 ಕಪ್
1 ಚಮಚ
*ಗರಂ ಮಸಾಲಾ 2 ಟೀ ಸ್ಪೂನ್
*ಧನಿಯಾ ಪುಡಿ 2 ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ 1.5 ಚಮಚ
*ಬ್ಯಾಡಗಿ ಮೆಣಸಿನಕಾಯಿ 5
*ಗುಂಟೂರು ಮೆಣಸಿನಕಾಯಿ 5-6
*ಫ್ರೆಶ್ ಕ್ರೀಮ್ 1 ಚಿಕ್ಕ ಕಪ್
*ತುಪ್ಪ 3 ಚಮಚ
*ಉಪ್ಪು – ರುಚಿಗೆ ತಕ್ಕಷ್ಟು
*ಎಣ್ಣೆ 50
ನೀರು 300 2.
ಮಾಡುವ ವಿಧಾನ :
ಕುಕ್ಕರ್ ಗೆ ಮಟನ್ ಪೀಸುಗಳನ್ನು ಹಾಕಿ, ನೀರಿನ ಅಂಶ ಹೋಗುವವರೆಗೆ ಪ್ರೈ ಮಾಡಿ. ಅರಿಶಿಣ, ಉಪ್ಪು ಮತ್ತು ನೀರು ಹಾಕಿ 4 ವಿಷಲ್ ಕೂಗಿಸಿ. ಗೋಡಂಬಿ, ಬಾದಾಮಿ ನುಣ್ಣಗೆ ರುಬ್ಬಿಕೊಳ್ಳಿ. ಬ್ಯಾಡಗಿ ಮೆಣಸಿನಕಾಯಿ, ಗೂಂಟೂರು ಮೆಣಸಿನಕಾಯಿ ಹಾಗೂ ಮೊಸರನ್ನು ಸೇರಿಸಿ ರುಬ್ಬಿಡಿ. ಕಡಾಯಿಗೆ ತುಪ್ಪ, ಎಣ್ಣೆ ಹಾಕಿ ಕಾದ ನಂತರ, ಚಕ್ಕೆ, ಲವಂಗ, ಏಲಕ್ಕಿ, ಅನಾನಸ್ ಹೂ ಮತ್ತು ದೊಡ್ಡದಾಗಿ ಹೆಚ್ಚಿದ ಈರುಳ್ಳಿಯನ್ನು ಕೆಂಪಗಾಗುವವರೆಗೆ ಹುರಿಯಿರಿ. ಇದಕ್ಕೆ ಶುಂಠಿ,ಬೆಳ್ಳುಳ್ಳಿ ಪೇಸ್ಟ್, ಬೆಂದಿರುವ ಮಟನ್ ಪೀಸುಗಳು, ಧನಿಯಾ ಪುಡಿ, ಜಾಕಾಯಿ ಪುಡಿಯನ್ನು ಒಂದೊಂದಾಗಿ ಹಾಕಿ ಬೆರೆಸಿ. ರುಬ್ಬಿದ ಬ್ಯಾಡಗಿ ಮೆಣಸಿನಕಾಯಿ ಪೇಸ್ಟ್, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೈಯಾಡಿಸಿ. ಗೊಡಂಬಿ, ಬಾದಾಮಿ ಪೇಸ್ಟ್, ಗರಂ ಮಸಾಲ ಹಾಕಿ, ಎಲ್ಲವೂ ಬೆರೆತುಕೊಳ್ಳುವಂತೆ ಮಗುಚಿ. ಮುಚ್ಚಳ ಮುಚ್ಚಿ ಬೇಯಿಸಿ. ಬೆಂದನಂತರ ಹೊರಗಡೆ ತೆಗೆದು, ಇದರ ಮೇಲೆ ಫ್ರೆಶ್ ಕ್ರೀಮ್ ಹಾಕಿದರೆ ಶಾಹಿ ಮಟನ್ ಕುರ್ಮಾ ರೆಡಿ.