ವಿಜ್ಞಾನವು ಮೂಢನಂಬಿಕೆ ತೊಲಗಿಸಲು ಸಹಕಾರಿ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮಾ.01: ವಿಜ್ಞಾನವು ಮಕ್ಕಳಲ್ಲಿನ ಮೂಢ ನಂಬಿಕೆ ತೊಲಗಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಸಹಕಾರಿ ಯಾಗಲಿದೆ. ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಆರ್ ಎಚ್ ಎಮ್ ಚನ್ನಬಸವ ಸ್ವಾಮಿ ಆಭಿಪ್ರಾಯಪಟ್ಟರು.

 ಅವರು ನಿನ್ನೆ ಬಳ್ಳಾರಿಯ ಕಂಟೋನ್ಮೆಂಟ್ ನಲ್ಲಿರುವ ವೀರಶೈವ ವಿದ್ಯಾ ವರ್ಧಕ ಸಂಘದ ಎಸ್ ಕೆ ಮೋದಿ ಶಾಲೆಯಲ್ಲಿ ಆಚರಿಸಲಾದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ನಿಷ್ಠಿರುದ್ರಪ್ಪ ಮಾತನಾಡಿ,  ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯ ಅಗತ್ಯತೆ ಇದೆ ಪ್ರತಿಯೊಂದು ಏಕೆ  ಏನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು  ಸೂಕ್ತ ಉತ್ತರವನ್ನು ಪಡೆಯಬೇಕು ಯಾವುದನ್ನು ಸುಲಭವಾಗಿ ಒಪ್ಪಿಕೊಳ್ಳಬಾರದು ಎಂದರಲ್ಲದೇ ಇಂದು ವೈಜ್ಞಾನಿಕವಾಗಿ ಜಗತ್ತು ಬೆಳೆಯುತ್ತಿದ್ದು ಅದರ ವೇಗಕ್ಕೆ ನಾವೆಲ್ಲರೂ ಒಗ್ಗಿಕೊಳ್ಳಬೇಕಾಗಿದೆ ಇಸ್ರೋ ಕಾರ್ಯಾಚರಣೆಗಳು ವೈದ್ಯಕೀಯ ಸಂಶೋಧನೆ ಡಿಜಿಟಲ್ ತಂತ್ರಜ್ಞಾನ ಮತ್ತು ಸುಸ್ಥಿರ ನಾವಿನ್ಯತೆ ಯಲ್ಲಿ ಭಾರತದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.ಎಸ್ ಕೆ ಮೋದಿ ಶಾಲೆಯ ಅಧ್ಯಕ್ಷರಾದ ಏಳ್ಬೆಂಚಿ  ರಾಜಶೇಖರ್ ಮಾತನಾಡಿ, ಈ ಶಾಲೆಯ ವಿದ್ಯಾರ್ಥಿಗಳಾದ ಜಿ ಸಂಜೀವ ಶೆಟ್ಟಿ ಹಾಗೂ ಕುಮಾರಿ ಜಾಹ್ನವಿ ಬಿಎಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವಿದ್ಯಾರ್ಥಿಗಳಿಗಾಗಿ ಟೆಲಿಸ್ಕೋಪ್ ಕಾರ್ಯಗಾರ ಏರ್ಪಡಿಸಿತ್ತು ಇದರಲ್ಲಿ ಭಾಗವಹಿಸಿ ಯಶಸ್ವಿಯಾಗಿ ಶಾಲೆಗೆ ತಂದೆ ತಾಯಿಗಳಿಗೆ ಕೀರ್ತಿ ತಂದಿದ್ದಾರೆ ಇಂತಹ ಸದಾವಕಾಶವನ್ನು ಎಲ್ಲಾ ವಿದ್ಯಾರ್ಥಿಗಳು ಸಕಾಲದಲ್ಲಿ ಪಡೆದು ದೇಶದ ಹೆಮ್ಮೆಯ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದರು. ಈ ಸಂದರ್ಭದಲ್ಲಿ ಇಬ್ಬರೂ ವಿದ್ಯಾರ್ಥಿಗಳಿಗೆ     ವರ್ಲ್ಡ್ ಬುಕ್ ಆಫ್ ರೆಕಾರ್ಡ್  ಪ್ರಶಸ್ತಿ ಪತ್ರ ಮತ್ತು ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು . ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಯು. ರಮೇಶ್ ಚಂದ್ರಶೇಖರ್ ಆಚಾರಿ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಸುನಂದ ಎಂ ಪಾಟೀಲ್ ನಿರ್ವಹಿಸಿದರು ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ವಿಜ್ಞಾನ ಮತ್ತು ವೈಚಾರಿಕತೆಯ ಪ್ರತಿಜ್ಞಾವಿಧಿ ಭೋದಿಸಲಾಯಿತು.