
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.31: ರಾಜ್ಯ ಕರಾಟೆ ಶಿಕ್ಷಕರ ಸಂಘಕ್ಕೆ ಜಿಲ್ಲೆಯ ಕಟ್ಟೇಸ್ವಾಮಿಯವರನ್ನು ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯ ಕರಾಟೆ ಶಿಕ್ಷಕರ ಸಂಘಕ್ಕೆ ಆಯ್ಕೆಮಾಡಲಾಗಿದೆ.
ರಾಜ್ಯ ಕರಾಟೆ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಉಡುಪಿಯ ನಡೆದ ಸಂಘದ ಮಹಾಸಭೆಯಲ್ಲಿ ಸಂಘದ ನಿಯಮಾವಳಿಗಳ ಪ್ರಕಾರ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕರಾಟೆ ಶಿಕ್ಷಕರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು..
ಈ ವೇಳೆ ಮಂಗಳೂರಿನ ಮಹಮ್ಮದ್ ನದೀಮ್ ಅವರನ್ನು ಅಧ್ಯಕ್ಷರಾಗಿ ಹಾಗೂ ಬಳ್ಳಾರಿ ಜಿಲ್ಲೆಯ ಕಟ್ಟೇಸ್ವಾಮಿ,ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಮಾಡಲಾಗಿದೆ.
ಉಪಾಧ್ಯಕ್ಷರಾಗಿ ಬೆಂಗಳೂರಿನ ಸುಂದರಮ್, ಉಡುಪಿಯ ಸತೀಶ್ ಬೆಳ್ಮಣ್ಣು, ಕಾರವಾರದ ವಿಶಾಲ್ ಕೋಶಾಧಿಕಾರಿಯಾ ವಿಜಯಪುರದ ಶಿವಕುಮಾರ್ ಶಾರದಳ್ಳಿ, ರಾಜ್ಯ ವಕ್ತಾರರಾಗಿ ಕೊಪ್ಪಳದ ಮೌನೇಶ್ ವಡ್ಡಟ್ಟಿ,ಕಾರ್ಯಾಕಾರಣಿ ಸಭೆಯ ಸದಸ್ಯರಾಗಿ ವಿಜಯದ ಸುಭಾಷ್ ಮುತ್ಕೂರ್ ಹಾಗೂ ದಾವಣಗೆರೆಯ ಭಾಷ್ ಇವರನ್ನು ಆಯ್ಕೆ ಮಾಡಲಾಯಿತು.























