
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.29: ಶಿಖಂಡಿ ಚಲನ ಚಿತ್ರ ಮೇ 15 ರಂದು ಬಿಡುಗಡೆಯಾಗಲಿದೆಂದು ಚಿತ್ರದ ನಿರ್ಮಾಪಕ ಪೋಲಾ ಪ್ರವೀಣ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ವಿಷಯ ತಿಳಿಸಿದರು. ಚಿತ್ರ ಉತ್ತಮವಾಗಿ ಮೂಡಿದೆ. ಎಲ್ಲರೂ ನೋಡಿ ಆನಂದಿಸಿ. ತಾಯಿ ಪ್ರೀತಿಯ ವಸ್ತು, ಹಾಡು ಪ್ರೇಕ್ಷಕರ ಮನಕರುಗುವಂತೆ ಮೂಡಿದೆ. ಸಧ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಲಿದೆ.
ಮಂಗಳ ಮುಖಿಯರ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗುವಂತೆ ಅವರು ದೇವರ ಸಮಾನರಂತೆ ಇದರಲ್ಲಿ ಪ್ರದರ್ಶಿಸಿದೆಂದರು.
ಚಿತ್ರ ಲಾಭಗಳಿಸಿದರೆ ಹೊಲಿಗೆ ಯಂತ್ರ ಕೊಡಿಸಿ ಅವರು ಭಿಕ್ಷೆಬೇಡುವುದನ್ನು ತಪ್ಪಿಸುವ ಚಿಂತನೆ ಇದೆಂದರು.
ನಿರ್ದೇಶಕ ಗುರುಮೂರ್ತಿ ಮಾತನಾಡಿ ಮಹಾಭಾರತದ ಶಿಖಂಡಿ ಪಾತ್ರವನ್ನು ಮೂಲವಾಗಿಟ್ಟುಕೊಂಡು ಚಿತ್ರ ರಚಿಸಿದೆ.
ಮೊದಲಿಗೆ ರಾಜ್ಯದ 100 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲಿದೆ. ನಂತರ ತೆಲುಗು ಭಾಷೆಯಲ್ಲೂ ಬಿಡುಗಡೆ ಮಾಡಲಿದೆ. ಬಳ್ಳಾರಿಯ 22 ಜನರಿಗೆ ಈ ಸಿನಿಮಾದಲ್ಲಿ ಅವಕಾಶ ನೀಡಿದೆ. ಬಳ್ಳಾರಿ ಮೈಸೂರು, ಬಿಡದಿ, ಮಾಗಡಿ, ಬೆಂಗಳೂರು ಮೊದಲಾದ ಕಡೆ ಚಿತ್ರೀಕರಿಸಿದೆ.
ನಾಲ್ಕು ಹಾಡಿವೆ. 2.20 ತಾಸಿನ ಸಿನಿಮಾ. ಕಿನ್ನಾಳ್ ಸ್ವಾಮಿ ಹಾಡು ಬರೆದಿದ್ದಾರೆಂದರು
ನಾಯಕಿ ಖ್ಯಾತಿ ಮಾತನಾಡಿ ಈ ಚಿತ್ರ ನನಗೆ ನಾಲ್ಕನೇ ಚಿತ್ರ. ಚಿತ್ರವನ್ನು ನೋಡಿ ಆನಂದಿಸಿ ಎಂದರು. ನಾಯಕ ನಟ ಯುವರಾಜಗೌಡ ಮಾತನಾಡಿ
ಖಳನಾಯಕ ದೀಪಕ್, ಚಿತ್ರ ಹಾರರ್, ತ್ರಿಲ್ಲರ್ , ಕಾಮಿಡಿ ಜೊತೆಗೆ ಮನೋರಂಜಬೆಯನ್ನು ಹೊಂದಿದೆಂದರು. ಇದು ನನ್ನ ಮೊದಲ ಚಿತ್ರ ನೋಡಿ ಬೆಂಬಲಿಸಬೇಕು ಎಂದರು.
ಸುದ್ದಿಗೋಷ್ಟಿಯಲ್ಲಿ, ನಿಖಿಲ್ ಮಾಳೆಖರ್, ಸ್ವಾಮಿ, ಚಾಂದಿನಿ. ಆನಂದ್ ಹೂಗಾರ್ ಇದ್ದಾರು. ಸಹ ನಿರ್ದೇಶಕ ಉಮೇಶ್ ಇದ್ದರು.

























