
ಚೆಸ್ಟರ್ ಲೇ ಸ್ಟ್ರೀಟ್, ಜು.೩: ಇಲ್ಲಿ ಕಳೆದ ರಾತ್ರಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ೫ ಪಂದ್ಯಗಳ ಟಿ೨೦ ಕ್ರಿಕೆಟ್ ಸರಣಿಯ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ನಿಗದಿತ ೨೦ ಓವರ್ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೮೯ ರನ್ ಗಳಿಸಿತು.
ನಾಯಕ ಶ್ರೇಯಸ್ ಅಯ್ಯರ್ ೬೮ ರನ್, ಅಭಿಷೇಕ್ ಶರ್ಮಾ ೫೯ ರನ್, ಶಿವಂ ದುಬೆ ೪೨ ರನ್ ಗಳಿಸಿದರು. ಇಂಗ್ಲೆಂಡ್ ಪರ ಸಾಕಿಬ್ ಮಹಮೂದ್ ೩ ವಿಕೆಟ್ ಪಡೆದರು. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡ ಕಾರಣ ಆತಿಥೇಯ ಇಂಗ್ಲೆಂಡ್ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ.
ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು. ಎರಡೂ ತಂಡಗಳು ಇದೇ ಶನಿವಾರ ಮ್ಯಾಂಚೆಸ್ಟರ್ನಲ್ಲಿ ಎರಡನೇ ಟಿ೨೦ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಟಿ೨೦ ಸರಣಿಯ ನಂತರ ಭಾರತ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.
























