
ಸಂಜೆವಾಣಿ ವಾರ್ತೆ
ಹೊಸಪೇಟೆ.ಜೂ.29 ನಗರದ ಚಿತ್ರಕೇರಿಯ ರಾಜಾ ವೆಂಕಟಪ್ಪ ನಾಯಕ ವೃತದಲ್ಲಿ ಸ್ಥಳೀಯ ಸ್ಪೂರ್ತಿ ವೇದಿಕೆ ವತಿಯಿಂದ ಭಾನುವಾರ ಪಲ್ಸ್ ಪೋಲಿಯೋ ಕಾರ್ಯಕ್ರಮ ಆಯೋಜಿಸಲಾಗಿತ್ತು .
ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಲ್.ಆರ್. ಶಂಕರ್ ನಾಯಕ್ ಮಗುವಿಗೆ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲಿಯೋ ಹನಿ ಹಾಕಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜಂಬಯ್ಯ, ನೋಡಲ್ ಅಧಿಕಾರಿ ಡಾ. ನಾಗರಾಜ್, ಸ್ಪೂರ್ತಿ ವೇದಿಕೆಯ ಬಿಸಾಟಿ ತಾಯಪ್ಪ ನಾಯಕ, ರಾಜು, ತೋಟಪ್ಪ, ಪರಶುರಾಮ, ದೇವೇಂದ್ರಪ್ಪ, ಸೂರ್ಯ ಕಿರಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
























