Home ಜಿಲ್ಲೆ ನಲ್ಲ ಚೆರುವಿನ 5 ವರೆ ಎಕರೆ ಒತ್ತುವರಿ ತೆರವು ಇದು ಜಮೀನೆಂದ ಸದಾಶಿವಪ್ಪ

ನಲ್ಲ ಚೆರುವಿನ 5 ವರೆ ಎಕರೆ ಒತ್ತುವರಿ ತೆರವು ಇದು ಜಮೀನೆಂದ ಸದಾಶಿವಪ್ಪ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.16: ನಗರದ ನಲ್ಲಚೆರವು ಪ್ರದೇಶದಲ್ಲಿನ ಸಿಟಿಎಸ್ ವಾರ್ಡ್ 20, ಬ್ಲಾಕ್ ನಂ 8 ಸರ್ವೇ ನಂಬರ್ 958 /1ಬಿ ಗೆ ಸೇರಿದ 5.5 ಎಕರೆ ಜಮೀನು ಸರ್ಕಾರಕ್ಕೆ ಸೇರಿದ್ದು ಎಂದು ಜಿಲ್ಲಾಡಳಿತ ಫಲಕ ಹಾಕಿದೆ.

ಈ ವೇಳೆ ಎನ್.ಕೆ. ಸದಾ ಶಿವಪ್ಪ ಮತ್ತು ಅವರ ಸಹೋದರ ವಿ.ಕೆ.ಬಸಪ್ಪ ಅವರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿ ಹಲವು ದಾಖಲೆಗಳನ್ನು ಪ್ರದರ್ಶಿಸಿ ಇದು ನಮ್ಮ ಜಮೀನು ಎಂದು ಲ್ಯಾಂಡ್ ರೆಕಾರ್ಡ್ ಕಚೇರಿಯ ಅಧಿಕಾರಿಗಳೇ ಈ ಹಿಂದೆ ಸರ್ವೇ ಮಾಡಿ ದಾಖಲೆ ನೀಡಿದ್ದಾರೆಂದರು.

ಆದರೆ ಅಧಿಕಾರಿಗಳು ಇದು ಕೆರೆಯ ಜಾಗ, ನಿಮ್ಮ ಮೂರು ಎಕರೆ ಬೇರೆಡೆ ಇದೆಂದು ಹೇಳಿ ತೆರವಿಗೆ ತಿಳಿಸಿ ಫಲಕ ಹಾಕಿದ್ದಾರೆ

ಈ ಐದುವರೆ ಎಕರೆ ಜಮೀನಿನ ಪೈಕಿ 3 ಎಕರೆ ಕಳೆದ 35 ವರ್ಷಗಳಿಂದ ನಮ್ಮ ಹೆಸರಿಗೆ ಇದೆ. ಕೋರ್ಟ್ ನಿಂದ ಈ ಜಮೀನಿಗೆ ಯಾರು ಅತಿಕ್ರಮ ಪ್ರವೇಶ ಮಾಡುವಂತಿಲ್ಲ ಎಂದು ಆದೇಶ ತಂದಿದೆ. ಜೊತೆಗೆ ಇಲ್ಲಿ ಕೆಲ ಮನೆ ನಿರ್ಮಾಣ ಮಾಡಿದೆ. ಪಾಲಿಕೆಗೆ ಅಪ್ ಟು ಡೇಟ್ ತೆರಿಗೆ ಪಾವತಿಸಿದೆ. ಆದರೂ ಇಂದು ಜಿಲ್ಲಾಡಳಿತ ಒತ್ತಾಯದಿಂದ ನಮ್ಮ ಜಮೀನಲ್ಲಿ ಪ್ರವೇಶ ಮಾಡಿ ಪಲಕ ಹಾಕಿದ್ದಾರೆ. ಇದು ನ್ಯಾಯಾಲಯದ ಉಲ್ಲಂಘನೆ, ನಮ್ಮ ಜಮೀನು ಎಲ್ಲಿದೆಂದು ತೋರಿಸಲಿ. ಅಧಿಕಾರಿಗಳ ಈ ಕ್ರಮದ ವಿರುದ್ದ ನ್ಯಾಯಾಲಯದ ಮೊರೆ ಹೋಗುವುದಾಗಿ ಎನ್.ಕೆ.ಸದಾಶಿವಪ್ಪ ಸಂಜೆವಾಣಿಗೆ ತಿಳಿಸಿದರು.

ಈ ಮಧ್ಯೆ ಭತ್ರಿ ಪ್ರದೇಶದಲ್ಲೂ ಒತ್ತವರಿ ಮಾಡಿದ್ದ ನಿವೇಶನವನ್ನು ಸಹ ಜಿಲ್ಲಾಡಳಿತ ತೆರವುಗೊಳಿಸಿತು.