
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.05: 18ನೇ ವಾರ್ಡಿನ ವೆಂಕಟೇಶ್ವರನಗರ ಮೂರನೇ ಮುಖ್ಯ ರಸ್ತೆಯನ್ನು ಹಾಕಲು ತೋಡಿರುತ್ತಾರೆ ಅದರ ಜೊತೆಯಲ್ಲಿ ಓಪನ್ ಡ್ರೈನೇಜತೋಡಿ ಬಿಟ್ಟಿರುತ್ತಾರೆ ಇದರಿಂದ ಮ ನೆಗಳಿಗೆ ಹೋಗುವುದಕ್ಕೆ ಬರೋದಕ್ಕೆ ಬಹಳ ತೊಂದರೆಯನ್ನು ಅನುಭವಿ ಸುತ್ತಿದ್ದೇವೆ ಮುಖ್ಯ ರಸ್ತೆಯನ್ನು ಸಂಪೂರ್ಣವಾಗಿ ಸುಮಾರು ಒಂದು ಅಡಿಯಷ್ಟು ರಸ್ತೆಯನ್ನು ಹಾಕಲು ಕುಣಿಯನ್ನು ತೋಡಿ ಬಿಟ್ಟಿರುತ್ತಾರೆ ಒಂದುವರೆ ತಿಂಗಳಾದರೂ ಈ ರಸ್ತೆಯ ಅಭಿವೃದ್ಧಿಯ ಒಂದು ಪರ್ಸೆಂಟ್ ಸಹ ಕೆಲಸ ಮಾಡಿರುವುದಿಲ್ಲ ಕಾರ್ಪೊರೇಷನ್ ಸಿಬ್ಬಂದಿಯವರಾಗಲಿ ತೋಡಿದ ದಿವಸದಿಂದ ಇಲ್ಲಿಯವರೆಗೂ ತಿರುಗಿ ನೋಡಿರುವುದಿಲ್ಲ ಆದ್ದರಿಂದ ಇತ್ತ ಕಡೆ ನಿವಾಸಿಗಳಿಗೆ ಬಹಳಷ್ಟು ತೊಂದರೆ ಆಗಿರುವುದರಿಂದ ಈ ರಸ್ತೆ ಅಭಿವೃದ್ಧಿ ಕಾರ್ಯವನ್ನು ಬೇಗನೆ ಮುಗಿಸಿ ಕೊಡಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಸಂದರ್ಭದಲ್ಲಿ ವೆಂಕಟೇಶ್ವರ ನಗರ ಸೇವಾ ಸಂಘದ ಅಧ್ಯಕ್ಷರಾದ ಪಿ. ಧನಂಜಯ, ಭೀಮ ಲಿಂಗನಗೌಡ, ಪಿ .ಎಂ. ನಟ ರಾಜ ಲೋಕರಾಜ್ ,ವೀರೇಶ್, ಎಂ ರವಿ ,ಸತೀಶ, ಮುಲ್ಲಂಗಿ ಗಿರಿ, ರಘು ,ಮಯೂರ ಟ್ರಾನ್ಸ್ಪೋರ್ಟ್ ಸೀನ, ಮುಂತಾದವರು ಪಾಲ್ಗೊಂಡಿದ್ದರು.






















